ಯಾದಗಿರಿ : ನೋವೆಲ್ ಕೊರೊನಾ ವೈರಸ್ ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ್ದ ಮಾದರಿಗಳ ಪೈಕಿ ಮೇ ೧೭ರಂದು ಮತ್ತೆ ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ರೋಗಿಗಳ ಸಂಖ್ಯೆ: ಪಿ-೧೧೩೯, ಪಿ-೧೧೪೦, ಪಿ-೧೧೪೦ ಹಾಗೂ ಮೇ ೧೨ರಂದು ದೃಢಪಟ್ಟಿದ್ದ ಪಿ-೮೬೭, ಪಿ-೮೬೮ ವ್ಯಕ್ತಿಗಳ ಆರೋಗ್ಯ ಸ್ಥಿರವಾಗಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾನುವಾರ ೧೪೪ ಮಾದರಿಗಳ ವರದಿ ನೆಗೆಟಿವ್ ಬಂದಿದ್ದು, ಮೇ ೧೭ರವರೆಗೆ ಒಟ್ಟು ೧,೯೯೫ ಮಾದರಿಗಳ ವರದಿ ನೆಗೆಟಿವ್ ಬಂದAತಾಗಿದೆ. ಭಾನುವಾರ ಕಳುಹಿಸಲಾದ ೪೧೦ ಹೊಸ ಮಾದರಿಗಳು ಸೇರಿದಂತೆ ೯೯೭ ಮಾದರಿಗಳ ವರದಿ ಬರಬೇಕಿದೆ. ಹೊಸ ಜಿಲ್ಲಾಸ್ಪತ್ರೆಯ ಐಸೊಲೇಷನ್ ವಾರ್ಡ್ನಲ್ಲಿ ೧೧ ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪುರ ಎಸ್ಐಸಿ ನಲ್ಲಿ ೩೬ ಜನರನ್ನು ಮತ್ತು ಸುರಪುರ ಸೂಪರ್ ಕ್ವಾರಂಟೈನ್ ಸೆಂಟರ್ನಲ್ಲಿ ೫೧ ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದ ೧೦೯ ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ೨೮೮ ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಒಟ್ಟು ೯೯ ಇನ್ಸ್ಟಿಟ್ಯೂಶನಲ್ ಕ್ವಾರಂಟೈನ್ ಸೆಂಟರ್ಗಳಲ್ಲಿ ಮೇ ೧೭ರಂದು ಸೇರ್ಪಡೆಯಾಗಿರುವ ೬೮೦ ಜನ ಸೇರಿದಂತೆ ಒಟ್ಟು ೬,೭೯೨ ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ತಿಳಸಿದ್ದಾರೆ.