Wednesday, August 10, 2022

Latest Posts

ಯಾದಗಿರಿ | 24 ಜನರಲ್ಲಿ ಕೊರೋನಾ ಸೋಂಕು ದೃಢ, 111 ಕ್ಕೆ ಏರಿಕೆ

ಯಾದಗಿರಿ : ಜಿಲ್ಲೆಯಲ್ಲಿ ಒಟ್ಟು 24 ಜನರಲ್ಲಿ ಕೊರೋನಾ ಸೋಂಕು ದೃಡಪಟ್ಟಿದ್ದು ಒಟ್ಟು 111 ಕ್ಕೆ ಎರಿಕೆಯಾಗಿದ್ದು ಜನರತೆಯನ್ನು ಬೆಚ್ಚಿಬೀಳಿಸಿದೆ.  ಶನಿವಾರ ಒಂದೆ ದಿನ 72 ಜನರಲ್ಲಿ ಕಂಡು ಬಂದ ಸೋಂಕು ಭಾನುವಾರ ಎಳಿಗ್ಗಿನ ಬುಲೆಟಿನಲ್ಲಿ 6 ಜನರಲ್ಲಿ ಮತ್ತು ಸಂಜೆ ಬಿಡುಗಡೆಯಾದ ಬುಲೆಟಿನಲ್ಲಿ 18 ಜನರಲ್ಲಿ ಸೋಂಕು ಕಂಡು ಬಂದಿದ್ದು, ಒಟ್ಟು 111 ಕ್ಕೆ ಏರಿಕೆಯಾಗಿದೆ.
ಈ ಎಲ್ಲಾ ಪ್ರಕರಣಗಳು ಕ್ವಾರಂಟೈನನಲ್ಲಿ ನಿಗಾ ಇಡಲಾದ ಜನರಲ್ಲಿ ಕಂಡು ಬಂದಿದ್ದು, ಇವರೆಲ್ಲ ಮಹಾರಾಷ್ಟçದ ಮುಂಬೈದಿAದ ಬಂದ ಕೂಲಿ ಕಾರ್ಮಿಕರೇ ಆಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಎರಡು ದಿನಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿದ್ದು, ಜಿಲ್ಲೆಯ ಜನತೆಯ ನಿದ್ದೇ ಕೆಡಿಸಿದಂತಾಗಿದೆ. ಕಾರಣ ಬಹುತೇಕ ಕ್ವಾರಂಟೈನ ಕೇಂದ್ರಗಳಲ್ಲಿ ಸಾಮಜಿಕ ಅಂತರ ಕಪಾಡುತ್ತಿಲ್ಲ. ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಕಾಮಿಕರನ್ನು ಅಲ್ಲಿ ಇರಿಸಿದ್ದರಿಂದ ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳು ಪತ್ತೇಯಾಗುವ ಸಾಧ್ತೆಯನ್ನು ಅಲ್ಲಗಳೆಯುವಂತಿಲ್ಲ.
ಜಿಲ್ಲೆಯ ಕಂದಕೂರು ಕ್ವಾರಂಟೈನ ಕೇಂದ್ರದಲ್ಲಿ ಶನಿವಾರ 5 ಜನರಲ್ಲಿ ಕಂಡು ಬಂದಿದ್ದು ಕೇಂದ್ರದಲ್ಲಿನ ಜನತೆಯಲ್ಲಿ ಆತಂಕ ಮೂಡಿಸಿದೆ. ಒಂದೆ ಕೋಣೆಯಲ್ಲಿ ಎಲ್ಲರೂ ಇರುವುದರಿಂದ ಮಕ್ಕಳಲ್ಲಿ ಕಂಡು ಬಂದಿರುವ ಹಿನ್ನಲೆಯಲ್ಲಿ ನಮ್ಮನ್ನು ತಪಾಸಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಸಂಗತಿ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ಈಗ ದೃಡಪಟ್ಟ ಸೋಂಕು ಪ್ರಕರಣದಲ್ಲಿ ಅರ್ಧದಷ್ಟು ಮಕ್ಕಳೇ ಇರುವುದರಿಂದ ಅವರೆಲ್ಲ ಪೋಷಕರ ಜೊತೆಗೆ ಇದ್ದವರಾಗಿದ್ದರೆ. ಇದರಿಂದ ಅವರ ಪೋಷಕರಲ್ಲಿ ಆತಂಕ ಹುಟ್ಟಿಸಿದ್ದು, ಜಿಲ್ಲಾಡಳಿತ ಕಾರ್ಯ ವೈಖರಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಸೋಮಕು ತಗಲಿದ ಪ್ರಕರಣ ಹೊರಬಿಳುತ್ತಿದ್ದಂತೆ ಕ್ವಾರಂಟೈನನಲ್ಲಿ ಇರುವ ಎಲ್ಲರಲ್ಲಿ ಭೀತ ಕಾಣಹತ್ತಿದೆ. ಅದಕ್ಕಾಗಿ ಜಿಲ್ಲಾಡಳಿತ ಮಕ್ಕಳ ಪೋಷಕರನ್ನು ತಪಾಸಣೆಗೆ ಒಳಪಡಿಸಿ ಅವರಲ್ಲಿ ಮನೆ ಮಾಡಿದ ಆತಂಕವನ್ನು ದೂರಮಾಡಲು ಮುಂದಾಗಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss