ಯಾದಗಿರಿ : ಕಳೆದ 26 ದಿನಗಳಿಂದ ಕೃಷ್ಣಾ ನದಿ ನಡುಗಡ್ಡೆಯಲ್ಲಿ ಸಿಲುಕಿದ್ದ 230 ಕುರಿಗಳನ್ನು ಶುಕ್ರವಾರದಂದು ರಕ್ಷಿಸಲಾಯಿತು.
ಮಹಾರಾಷ್ಟ್ರದಲ್ಲಿ ಮತ್ತು ರಾಜ್ಯ ಪಶ್ಚಿಮ ಘಟ್ಟದಲ್ಲಿ ಬಿದ್ದ ಮಳೆಯಿಂದ ಉಂಟಾದ ಕೃಷ್ಣಾ ನದಿ ಪ್ರವಾಹದಿಂದಾಗಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪೂರ ಗ್ರಾಮದ ಹತ್ತಿರ ಕುರಿಗಾಹಿ ಟೋಪಣ್ಣ ಎಂಬಾತನು ತನ್ನ 230 ಕುರಿಗಳೊಂದಿಗೆ ನಡುಗಡ್ಡೆಯಲ್ಲಿ ಸಿಕ್ಕು ಹಾಕಿಕೊಂಡಿದ್ದ. ಸುದ್ದಿ ತಿಳಿದ ಸ್ಥಳೀಯ ಶಾಸಕ ರಾಜುಗೌಡರು ಎನ್ ಡಿ ಆರ ಎಫ ಸಹಾಯದಿಂದ ಕುರಿಗಾಹಿ ಟೋಪಣ್ಣನನ್ನು ಸುರಕ್ಷತ ಸ್ಥಳಕ್ಕೆ ಕರೆತರಲಾಯಿತು. ಆದರೆ ಕುರಿಗಳನ್ನು ತರಲಾಗಲಾಗ್ ಕಾರಣ ಕಳೆದ 26 ದಿನಗಳಿಂದ ನಡುಗಡ್ಡೆಯಲ್ಲಿಯೇ ಇದ್ದವು.
ಈಹ ನದಿಯಲ್ಲಿ ಪ್ರವಾಹ ಇಳಿಮುಖವಾಗಿದ್ದರಿಂದ ಮೀನುಗಾರರ ಸಾಹಾಯದಿಂದ 230 ಕುರಿಗಳನ್ನು ಸುರಕ್ಷಿತ ಸ್ಥಳಕ್ಕೆ ತರಲಾಯಿತು. ಆಸರೆ 194 ಕುರಿಗಳ ಮಾತ್ರ ತೆಪ್ಪದಲ್ಲಿ ತಂದು ರಕ್ಷಣೆ ಮಾಡಲಾಗಿದ್ದು, ಇನ್ನುಳಿದ 36 ಕುರಿಗಳು ನೀರು ಪಾಲಾಗಿವೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಛಾಯಾಭಗವತಿ ದೇಗುಲದ ತೀರದ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಕಳೆದ 26 ದಿನಗಳಿಂದ ಕುರಿಗಳು ಸಿಲುಕಿದ್ದವು. ಇಂದು ಕೃಷ್ಣಾ ನದಿಯ ನೀರಿನ ಹರಿವು ಪ್ರಮಾಣ ಸಂಪೂರ್ಣ ಕಡಿಮೆಯಾದ ಹಿನ್ನೆಲೆ ಕುರಿಗಾಹಿ ಟೋಪಣ್ಣ, ಡೀಕಪ್ಪ, ಸಂತೋಷ,ಕೃಷ್ಣಾ, ಹೇಮಂತ ಅವರು ಮೀನುಗಾರರ ಸಹಾಯದಿಂದ ತೆಪ್ಪದ ಮೂಲಕ ರಕ್ಷಣೆ ಮಾಡಿದ್ದಾರೆ.
ಕುರಿಗಾಗಿ ಕಣ್ಣೀರು…
ಐಬಿ ತಾಂಡಾದ ನಿವಾಸಿ ಟೋಪಣ್ಣ ಕೂಡ ಕೃಷ್ಣಾ ನದಿಯ ಪ್ರವಾಹದಲ್ಲಿ ಕುರಿಗಳ ಜೊತೆ ನಡುಗಡ್ಡೆಯಲ್ಲಿ ಸಿಲುಕಿದ್ದರು. ನಂತರ ಎನ್ ಡಿಆರ್ ಎಫ್ ತಂಡವು ಅಗಸ್ಟ್ 9 ರಂದು ಬೋಟ್ ಮೂಲಕ ಕುರಿಗಾಹಿ ಟೋಪಣ್ಣ ಅವರನ್ನು ರಕ್ಷಣೆ ಮಾಡಲಾಗಿತ್ತು. ಆದರೆ, ಕೃಷ್ಣಾ ನದಿಯಲ್ಲಿ ಹೆಚ್ಚಿನ ಪ್ರವಾಹ ಹಿನ್ನೆಲೆ ನಡುಗಡ್ಡೆಯಲ್ಲಿರುವ ಕುರಿಗಳನ್ನು ತರಲು ಸಾಧ್ಯವಾಗಿರಲಿಲ್ಲ. ಕಳೆದ 26 ದಿನಗಳಿಂದ ಕುರಿಗಾಹಿ ಟೋಪಣ್ಣ, ಸಂತೋಷ,ಹಾಗೂ ಕೃಷ್ಣಾ, ಡೀಕಪ್ಪ ಅವರು ನದಿ ತೀರದಲ್ಲಿ ಕುರಿಗಳನ್ನು ದೂರದಿಂದ ಕಾಯುತ್ತಿದ್ದರು. 36 ಕುರಿಗಳು ಕೃಷ್ಣಾ ನದಿ ಪಾಲಾಗಿದ್ದಕ್ಕೆ ಕುರಿಗಾಹಿಗಳು ಕಣ್ಣೀರಿಟ್ಟರು.
ಕಳೆದ 26 ದಿನಗಳಿಂದ ಗಡ್ಡಿಯಲ್ಲಿ ಸಿಲುಕಿದ ಉಳಿದ ಕುರಿಗಳನ್ನು ದೇವರು ಕಾಪಾಡಿದ್ದಾನೆಂಬ ನಂಬಿಕೆಯಿಂದ ನದಿ ತೀರದಲ್ಲಿರುವ ದಕ್ಷಿಣ ಕಾಶಿ ಎಂದೆ ಖ್ಯಾತಿಯಾದ ಛಾಯಾಭಗವತಿ ದೇವಸ್ಥಾನದಲ್ಲಿ ದೇವಿಗೆ ಪೂಜೆ ಮಾಡಿ ನಂತರ ಸಿಹಿ ಹಂಚಿ ಕುರಿಗಾಹಿ ಟೋಪಣ್ಣ ಖುಷಿಪಟ್ಟರು.
ಯಾದಗಿರಿ : 26 ದಿನಗಳಿಂದ ಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡ ಕುರಿಗಳ ರಕ್ಷಣೆ
- Advertisement -