Wednesday, August 17, 2022

Latest Posts

ಯಾದಗಿರಿ| 3 ದಿನದಲ್ಲಿ 3 ಹೆಚ್ಚುವರಿ ಹತ್ತಿ ಖರೀದಿ ಕೇಂದ್ರ ಆರಂಭಿಸಲು ರೈತ ಸಂಘ ರೈತ ಸೇನೆ ಜಿಲ್ಲಾಡಳಿತಕ್ಕೆ ಆಗ್ರಹ

ಯಾದಗಿರಿ: ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ಹತ್ತಿ ಬೆಳೆದ ರೈತನ ನೆರವಿಗೆ ಬರಲು ಇನ್ನು ೨-೩ ಹತ್ತಿ ಖರೀದಿ ಕೇಂದ್ರಗಳನ್ನು ಮೂರು ದಿನಗಳಲ್ಲಿ ಆರಂಭಿಸುವತೆ ರೈತ ಸಂಘ ರೈತ ಸೇನೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ. ಇಲ್ಲವಾದಲ್ಲಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಸಂಘಟನೆ ಎಚ್ಚರಿಸಿದೆ.
ಈ ಕುರಿತು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ರೈತ ಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಎ. ಪಾಟೀಲ್ ಮದ್ದರಕಿ, ಕೊರೋನಾ ವೈರಸ್ ಹಾವಳಿಯಿಂದಾಗಿ ಹಾಕಲಾದ ಬೀಗಮುದ್ರೆಯಿಂದಾಗಿ ದೇಶದ ಎಲ್ಲರಂತೆ ಹತ್ತಿ ಬೆಳೆದ ರೈತರೂ ಸಂಕಷ್ಟಕ್ಕೆ ಈಡಾಗಿದ್ದು, ಕಳೆದ ಮೂರು ತಿಂಗಳಿನಿAದ ನಷ್ಟದಲ್ಲಿ ಕಷ್ಟದಲ್ಲಿ ಇದ್ದಾರೆ.
ಸರ್ಕಾರ ರೈತರ ನೆರವಿಗೆ ಬಂದು ಹತ್ತಿ ಖರೀದಿ ಕೇಂದ್ರಗಳನ್ನು ತೆರೆದಿದ್ದರೂ ಸಹ ಅದು ಸಮರ್ಪಕವಾಗಿಲ್ಲ. ಈಗಾಗಲೇ ೪೫೦೦ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಈ ರೈತರಿಂದ ಕೊರೋನಾ ಕಾರಣ ದಿನವೊಂದಕ್ಕೆ ೩೦ ರೈತರಿಂದ ಮಾತ್ರ ಹತ್ತಿ ಖರೀದಿಸಲಾಗುತ್ತಿದೆ. ಇದನ್ನು ಲೆಕ್ಕಿಸಿದರೆ ಇನ್ನು ಐದು ತಿಂಗಳ ವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ. ಇದಲ್ಲದೇ ಇನ್ನು ನೋಂದಣಿಯಾಗದ ಬಹಳಷ್ಟು ರೈತರು ಹೊರಗುಳಿದಿದ್ದು ಎಲ್ಲರಿಗೂ ಖರೀದಿ ಕೇಂದ್ರದ ಸೌಲತ್ತು ಸಿಗುವಂತಾಬೇಕಿದೆ.
ಈ ಮದ್ಯೆ ಈಗಾಗಲೇ ಮುಂಗಾರು ಚುರುಕಾಗುವ ಲಕ್ಷಣಗಳಿವೆ, ವಾಯುಭಾರ ಕುಸಿತವಾಗುವ ಲಕ್ಷಣಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾದಲ್ಲಿ ಹತ್ತಿ ಬೆಳೆದ ರೈತರೂ ಸಂಕಷ್ಟಕ್ಕೆ ಈಡಾಗುವ ಸಾಧ್ಯತೆ ಇರುವುದರಿಂದ ಈ ಸಮಸ್ಯೆಯಿಂದ ರೈತರು ಪಾರಾಗಬೇಕೆಂದರೆ ತಕ್ಷಣ ಇನ್ನು ೨-೩ ಹತ್ತಿ ಖರೀದಿ ಕೇಂದ್ರಗಳನ್ನು ಆರಂಭಿಸುವುದು ಸೂಕ್ತ ಎಂಬುದು ರೈತರ ಅಭಿಮತವೂ ಆಗಿದೆ.
ಆದ್ದರಿಂದ ತಕ್ಷಣ ಇನ್ನು ಎರಡು ಮೂರು ಖರೀದಿ ಕೇಂದ್ರಗಳು ಆರಂಭಿಸಬೇಕು. ಈ ಸಮಸ್ಯೆಯನ್ನು ತುರ್ತು ಎಂದು ಪರಿಗಣಿಸಿ ತಕ್ಷಣ ಮುಂದಿನ ಮೂರು ದಿನಗಳಲ್ಲಿ ಖರೀದಿ ಕೇಂದ್ರಗಳು ಆರಂಭಿಸಬೇಕು ಇಲ್ಲವಾದಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಸೋಪಣ್ಣ ಎಂ. ಹಳಿಸಗರ ಇನ್ನಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!