Wednesday, July 6, 2022

Latest Posts

ಯಾದಗಿರಿ: 5 ಪ್ರಕರಣಗಳ ದೃಢ, ಸೋಂಕಿತರ ಸಂಖ್ಯೆ 290ಕ್ಕೆ ಏರಿಕೆ

ಯಾದಗಿರಿ : ಮಂಗಳವಾರ ಸಂಜೆ ಬಿಡುಗಡೆ ಮಾಡಿದ ರಾಜ್ಯ ಆರೋಗ್ಯ ಬುಲೆಟನಲ್ಲಿ ಜಿಲ್ಲೆಯ 5 ಪ್ರಕರಣಗಳು ದೃಡಪಟ್ಟಿದ್ದು, ಒಟ್ಟು 290 ಕ್ಕೆ ಏರಿದೆ. ಸೋಮವಾರ ಯಾವುದೇ ಪ್ರಕರಣ ಬೆಳಕಿಗೆ ಬಂದಿದ್ದಲ್ಲ. ಇವತ್ತು ಕೇವಲ 5 ಪ್ರಕರಣಗಳು ಪತ್ತೇಯಾಗಿದ್ದು, ಅವರೆಲ್ಲರೂ ಮಹಾರಷ್ಟçದದಿಂದ ಬಂದ ಕೂಲಿ ಕಾರ್ಮಿಕರಾಗಿರ್ಧಧೂ, ಮೇ 12, 14 ಮತ್ತು 18ರಂದು ಹಿಂದಿರುಗಿರುತ್ತಾರೆ. ಎಂದು ಜಿಲ್ಲಾಧಿಕಾರಿ ಎಂ. ಕೊರ್ಮಾರಾವ ತಿಳಿಸಿದ್ದಾರೆ.
ಗುರುಮಠಕಲ್ ತಾಲ್ಲೂಕಿನ ಗಣಪುರ ಗ್ರಾಮದ 40 ವರ್ಷದ ಪುರುಷ (ಪಿ-3465), ಚಪೆಟ್ಲಾ ಗ್ರಾಮದ 18 ವರ್ಷದ ಯುವತಿ (ಪಿ-3466), ಮಿನಾಸಪುರ ಗ್ರಾಮದ 19 ವರ್ಷದ ಯುವತಿ (ಪಿ-3467), ಕೇಶ್ವರ ಗ್ರಾಮದ 21 ವರ್ಷದ ಪುರುಷ (ಪಿ-3468), ಯಾದಗಿರಿ ತಾಲ್ಲೂಕಿನ ಅಲ್ಲಿಪುರ ದೊಡ್ಡ ತಾಂಡಾದ 28 ವರ್ಷದ ಪುರುಷ (ಪಿ-3469) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇವರಲ್ಲಿ ನಾಲ್ಕು ಜನರು ಗುರುಮಠಕಲ್ ಪಟ್ಟಣದ ಕ್ವಾರಂಟೈನಲ್ಲಿ ಹಾಗೂ ಓರ್ವ ಅಲ್ಲಿಪೂರ ಕ್ವಾರಂಟೈನನಲ್ಲಿ ನಿಗಾಕ್ಕೆ ಇರಿಸಲಾಗಿತ್ತು. ಸೋಮವಾರ ಸಂಜೆಯವರಿಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಮಾದರಿಗಳ ಪರಿಣಾಮ ಬರಬೇಕಿದೆ.
ಮಾದರಿಗಳ ಪರೀಕ್ಷೆಯಲಿ ವಿಳಂಭವಾಗುತ್ತಿರುವ ಹಿನ್ನಲೆಯಲ್ಲಿ ಕ್ವಾರಂಠೈನನಲ್ಲಿದವರ 14 ದಿನಗಳ ಅವಧಿ ಮುಗಿದ ಕಾರಣ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಬಿಡುಜಡೆಯಾದವರಲ್ಲಿ ಸೋಂಕು ಇರುವ ಬಗ್ಗೆ ಪತ್ತೆಯಾಗುತ್ತಿರುವುದು ಜಿಲ್ಲೆಯ ಜನರ ನಿದ್ದೇ ಕೆಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss