ಯಾದಗಿರಿ: ಶನಿವಾರ ಮಧ್ಯಾಹ್ನದಂದು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೇಟ್ ಯಾದಗಿರಿ ಜನರನ್ನೆ ಬೆಚ್ಚಿಬೀಳಿಸಿದೆ. ಇವತ್ತು 72 ಜನರಲ್ಲ ಸೋಂಕು ದೃಡಪಟ್ಟಿದ್ದು `ಶನಿ` ಸಂಕಟ ಬಂದಂತಾಗಿದೆ. ಸೋಂಕಿತರೆಲ್ಲರೂ ಮಹಾರಾಷ್ಟ್ರದಿಂದ ಬಂದ ಕೂಲಿ ಕಾರ್ಮಿಕರಾಗಿದ್ದಾರೆ.
ಕಳೆದ ಒಂದು ವಾರದಲ್ಲಿ ಮಹಾರಾಷ್ಟ್ರದಿಂದ ಸುಮಾರು 4000 ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ನಗರದಕ್ಕೆ ವಲಸಿ ಬಂದಿದ್ದಾರೆ. ಅವರೆಲ್ಲರನ್ನೂ ಸ್ಕ್ರೀನಿಂಗ್ ಮಾಡಿ ಜಿಲ್ಲೆಯ ಹಲವು ಭಾಗದಲ್ಲಿ ಕ್ವಾರಂಟೈನನಲ್ಲಿ ನಿಗಾವಹಿಸಲಾಗಿದೆ. ಈಗ ಕಂಡ ಬಂದ ಪ್ರಕರಣಗಳೆಲ್ಲ ಕ್ವಾರಂಟೈನ ನಿಗಾದಲ್ಲಿ ಇದ್ದವರಾಗಿದ್ದರೆ.
ಇವತ್ತು ಕಂಡು ಬಂದ ಸೋಂಕಿನ ವರದಿಯಲ್ಲಿ ಬಹುತೆಕ ಚಿಕ್ಕ ಮಕ್ಕಳೆ ಜಾಸ್ತಿ ಇದ್ದಾರೆ. ಒಂದು ಪಿ-1756 ಒಂದು ವಷದ ಬಾಲಕಿ, ಪಿ-1855 2 ವರ್ಷದ ಬಾಲಕ, ಪಿ-1874 2 ವರ್ಷದ ಬಾಲಕಿ , ಪಿ-1881 6 ವರ್ಷದ ಬಾಲಕಿ, ಪಿ-1870 7 ವರ್ಷದ ಬಾಲಕಿ, ಪಿ-1904 7 ವರ್ಷದ ಬಾಲಕ, ಪಿ-1750 8 ವರ್ಷದ ಬಾಲಕ, ಪಿ-1755 8 ವರ್ಷದ ಬಾಲಕಿ, ಪಿ-1762 8 ವರ್ಷದ ಬಾಲಕಿ, ಪಿ-1880 8 ವರ್ಷದ ಬಾಲಕಿ, ಪಿ-1903 9 ವರ್ಷದ ಬಾಲಕಿ, ಪಿ-1751 10 ವರ್ಷದ ಬಾಲಕಿ, ಪಿ-1885 10 ವರ್ಷದ ಬಾಲಕಿ ಸೇರಿದಂತೆ ಒಟ್ಟು 72 ಮಂದಿಯ ವರದಿ ಬಂದಿದೆ. ಇದು ಆತಂಕಕಾರಿ ವಿಷಯವಾಗಿದ್ದು ಜಿಲ್ಲೆಯ ಜನರನ್ನು ತಲ್ಲಣಗೊಳಿಸಿದೆ.
ಶುಕ್ರವಾರದವರಿಗೆ 15 ಜನರು ಇದ್ದು, ಇವತ್ತು ಒಂದೇ ದಿನ 72 ಜನರಲ್ಲಿ ಸೋಂಕು ಕಂಡು ಬಂದಿದೆ. ಇನ್ನೂ ಸಂಜೆ ಬುಲೆಟಿನಲ್ಲಿ ಸಹ ವರದಿ ಬರುವ ಸಾಧ್ಯತೆ ಇದ್ದು, ಒಂದೆರಡು ದಿನಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಲಿದೆ ಎಂಬ ಮಾಹಿತಿ ಸ್ಥಳೀಯ ಆರೋಗ್ಯ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.
ಇನ್ನೂ ಸೋಂಕಿತರ ಟ್ರಾವೆಲ್ ಹಿಸ್ಟ್ರಿ ಗೊತ್ತಾಗಬೇಕಿದೆ. ಏಕೆಂದರೆ ಬಹುತೇಕ ಮಕ್ಕಳಲ್ಲಿ ಪ್ರಕರಣ ಕಂಡು ಬಂದಿದ್ದು, ಅವರ ಕುಟುಂಬದವರ ಹಾಗೂ ಕ್ಚಾರಂಟೈನನಲ್ಲಿ ಇದ್ದರೂ ಮನೆಯವರಿಂದ ಊಟ ತಿಂಡಿಯನ್ನು ಸರಬರಾಜು ಮಾಡಲಾಗಿದೆ. ಹೀಗಾಗಿ ಬರುವ ದಿನಗಳಲ್ಲಿ ಈ ಸೋಂಕು ಗ್ರಾಮೀಣ ಪ್ರದೇಶಕ್ಕೆ ಹರಡುವ ಸಾಧ್ಯತೆ ಇದೆ ಎಂಬ ಆತಂಕ ಜನರಲ್ಲಿ ಕೇಳಿಬರುತ್ತಿದೆ.
ಎಲ್ಲರನ್ನು ಜಿಲ್ಲಾ ಕೊವಿಡ್ -19 ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.