Saturday, June 25, 2022

Latest Posts

ಯಾರಿಗೂ ಭಯ ಬೇಡ, ದೇಶದಲ್ಲಿ ಆಹಾರ ಧಾನ್ಯದ ಕೊರತೆ ಇಲ್ಲ : ಪಾಸ್ವಾನ್

ಹೊಸದಿಲ್ಲಿ: ದೇಶದಲ್ಲಿ ಆಹಾರ ಧಾನ್ಯಗಳಿಗೆ ಯಾವುದೇ ಕೊರತೆ ಉಂಟಾಗದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಭಾನುವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್, ಮುಂದಿನ 9 ತಿಂಗಳವರೆಗೆ ಆಗುವಷ್ಟು ಆಹಾರಧಾನ್ಯವನ್ನು ದೇಶದ ವಿವಿಧ ಸರ್ಕಾರಿ ಗೋದಾಮುಗಲ್ಲಿ ದಾಸ್ತಾನು ಮಾಡಲಾಗಿದೆ ಎಂದರು. ಕೋರೋನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದಲ್ಲಿ ಆಹಾರ ಪದಾರ್ಥಗಳ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದು. ಈ ದಿಶೆಯಲ್ಲಿ ಬಡ ಜನತೆಗೆ ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿರುವ ಪಡಿತರ ವಿತರಣೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ . ದೇಶದ ಮೂಲೆ, ಮೂಲೆಗೆ ಸಕಾಲದಲ್ಲಿ ಧಾನ್ಯವನ್ನು ಸಾಗಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ . ದೇಶದ ಜನತೆಗೆ ಆಹಾರ ಪದಾರ್ಥಗಳ ಪೂರೈಕೆಯ ಅನಗತ್ಯ ಕಳವಳ ಬೇಡ ಎಂದು ಸಚಿವರು ಮನವಿ ಮಾಡಿದ್ದಾರೆ.
ಶನಿವಾರದ ವೇಳೆಗೆ ( ಏ.10) ದೇಶದ ವಿವಿಧ ಸರ್ಕಾರಿ ಗೋದಾಮುಗಳಲ್ಲಿ 235.33 ದಶಲಕ್ಷ ಮೆಟ್ರಿಕ್ ಟನ್ ಅಕ್ಕಿ, 299.45 ದಶಲಕ್ಷ ಮೆಟ್ರಿಕ್ ಟನ್ ಗೋಧಿ ಹಾಗೂ 534.74 ದಶಲಕ್ಷ ಮೆ. ಟನ್ ಇತರೆ ಆಹಾರಧಾನ್ಯ ಸಂಗ್ರಹವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss