ಕೊಪ್ಪಳ: ಕಳಪೆ ಬೀಜ ಹಾಗೂ ಗೊಬ್ಬರ ಮಾರಾಟ ಮಾಡುವವರನ್ನು ಯಾವುದೇ ಒತ್ತಡ ತಂತ್ರಕ್ಕೆ ಮಣಿಯದೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮುಂದೆಯೂ ಕೂಡ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಶುಕ್ರವಾರ ಕೊಪ್ಪಳದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳಪೆ ಬೀಜ ಹಾಗೂ ಗೊಬ್ಬರ ಮಾರಾಟ ಮಾಡುವವರ ದೊಡ್ಡ ಜಾಲವಿದೆ. ಅದನ್ನು ಇಲ್ಲಿವರೆಗೂ ಯಾರು ಪತ್ತೆ ಹಚ್ಚಿದ್ದಿಲ್ಲ. ನಾವು ಈಗ ಬೇದಿಸಿ ಸುಮಾರು ೧೫ ಕೋಟಿ ರೂ. ವೆಚ್ಚದ ಕಳಪೆ ಬೀಜಗಳನ್ನು ಪತ್ತೆ ಹಚ್ವಿ ವಶಕ್ಕೆ ಪಡೆದು ತಪ್ಪಿತಸ್ಥ ಕಂಪನಿಯರ ಮೇಲೆ ಈಗಾಗಲೆ ಕ್ರಮ ಕೈಗೊಂಡು ದೂರು ದಾಖಲಿಸಿ ಅದರಂತೆ ತನಿಖೆ ನಡೆಸಲಾಗಿದೆ ಎಂದರು.
ನಮಗೆ ರೈತರ ಹಿತ ಮುಖ್ಯ ಬಿತ್ತನೆ ಸಮಯದಲ್ಲಿ ರೈತರಿಗೆ ಯಾವುದೇ ಕಳಪೆ ಬೀಜ ಗೊಬ್ಬರದಿಂದ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ಯಾವುದೇ ಒತ್ತಡ ಇದ್ದರೂ ಕೂಡ ಕಳಪೆ ಬೀಜ, ಗೊಬ್ಬರ, ಹಾಗೂ ಔಷಧಿ ಮಾರಾಟ ಮಾಡುವವರ ಮಟ್ಟ ಹಾಕಿ ರೈತರ ಹಿತ ಕಾಪಾಡಲು ಮುಂದಾಗುತ್ರೇವೆ ಎಂದು ಹೇಳಿದರು.
ಮಾಜಿ ಸಚಿವ ಹೆಚ್. ವಿಶ್ವನಾಥ ಟಿಕೆಟ್ ಹಂಚಿಕೆ ಕುರಿತು ಮಾತನಾಡಿದ ಅವರು, ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಮುಂದೆ ಇನ್ನು ಅವಕಾಶವಿದೆ ಸ್ಥಾನ ಮಾನ ನೀಡುತ್ತಾರೆ ಎಂದು ಹೇಳಿದರು.
ಕೊರೋನಾ ಜಿಲ್ಲೆಯಲ್ಲಿ ಇಂದು ಕೂಡ ೬ ಪತ್ತೆಯಾಗಿವೆ. ಹೊರ ರಾಜ್ಯದಿಂದ ಬರುವವರಿಂದ ಸೋಂಕು ಹರಡಲು ಆರಂಭವಾಗಿದೆ. ಜನರೇ ಜಾಗೃತರಾಗಿ ಕೊರೋನಾ ನಿಯಂತ್ರಿಸಲು ಮುಂದಾಗಬೇಕು ಎಂದು ಹೇಳಿದರು