ಯಾವಾಗಲೂ ನಗ್ತಾ ಇರಬೇಕು, ಜೀವನದಲ್ಲಿ ಕಷ್ಟ ಏನೇ ಬಂದರೂ ಅದು ಹೋಗೇ ಹೋಗುತ್ತದೆ. ನಗು ಮಾತ್ರ ನಮ್ಮ ಜೊತೆಗಿರಬೇಕು ಎಂದು ದೊಡ್ಡವರು ಹೇಳ್ತಾರೆ. ಯಾವಾಗಲೂ ಖುಷಿಯಾಗಿರಲು ಯಾಕೆ ಪ್ರಯತ್ನ ಮಾಡಬೇಕು. ನಗುವುದರಿಂದ ಏನೆಲ್ಲ ಲಾಭ ಇದೆ ಗೊತ್ತಾ? ಇದೇನಿದು ನಗುವುದರ ಲಾಭಗಳನ್ನೂ ಹೇಳುತ್ತಿದ್ದೇವೆ ಎಂದುಕೊಳ್ತಿರಾ? ಪ್ರತಿದಿನಿ ನೀವು ಇನ್ನೂ ಹೆಚ್ಚು ಖುಷಿಯಾಗಿರಲಿ ಎನ್ನುವುದೇ ನಮ್ಮ ಉದ್ದೇಶ.. ನಗೋದ್ರಿಂದ ಏನೆಲ್ಲಾ ಲಾಭ ಇದೆ ನೋಡಿ..
- ಎಂಡೋರ್ಫಿನ್ಸ್ ಎಂಬ ಹಾರ್ಮೋನ್ ನಗುವುದರಿಂದ ರಿಲೀಸ್ ಆಗುತ್ತದೆ. ಇದು ನಿಮಗೆ ಪಾಸಿಟಿವ್ ಮೂಡ್ ನೀಡುತ್ತದೆ.
- ಒತ್ತಡ,ಆಂಕ್ಸೈಟಿ, ಹಾಗೂ ಡಿಪ್ರೆಶನ್ ಸಮಸ್ಯೆ ಬರುವುದಿಲ್ಲ.
- ಜೀವನ ಪ್ರೀತಿ, ಸ್ಯಾಟಿಸ್ಫ್ಯಾಕ್ಷನ್ ಹೆಚ್ಚುತ್ತದೆ.
- ಕಿಲ್ಲರ್ ಸೆಲ್ಸ್ ಆಕ್ಟಿವಿಟಿ ಹೆಚ್ಚು ಮಾಡಿ ಇನ್ಫೆಕ್ಷನ್ ನೀಡುವ ಸೆಲ್ಗಳ ವಿರುದ್ಧ ಹೋರಾಡುತ್ತದೆ.
- ವ್ಯಾಯಾಮ ಮಾಡಿದಾಗ ಹೃದಯದ ಆರೋಗ್ಯ ಹೇಗೆ ಹೆಚ್ಚುತ್ತದೋ ಅದೇ ರೀತಿ ನಕ್ಕರೂ ಆರೋಗ್ಯ ಹೆಚ್ಚುತ್ತದೆ.
- ನೋವನ್ನು ತಡೆದುಕೊಳ್ಳುವ ಶಕ್ತಿ ಹೆಚ್ಚುತ್ತದೆ.
- ಕಲಿಯುವಿಕೆ ಹಾಗೂ ಕ್ರಿಯಾತ್ಮಕ ಶಕ್ತಿ ಹೆಚ್ಚುತ್ತದೆ.