ಕೆಲವೊಮ್ಮೆ ನಮಗೆ ಅಡುಗೆ ಮಾಡೋಕೆ ಸಮಯ ಇಲ್ಲದಿದ್ದಾಗ ಯಾವುದಾದರೂ ಸಿಂಪಲ್ ಆಗಿ ತಯಾರಾಗುವ ಅಡುಗೆ ಮಾಡೋಕೆ ಯೋಚನೆ ಮಾಡುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ನೋಡಿ ಸಿಂಪಲ್ ಮಜ್ಜಿಗೆ ಸಾರಿನ ರೆಸಿಪಿ
ಬೇಕಾಗುವ ಪದಾರ್ಥಗಳು:
ಎಣ್ಣೆ
ಸಾಸಿವೆ
ಜೀರಿಗೆ
ಹಸಿಮೆಣಸಿನಕಾಯಿ
ಹಿಂಗು
ಅರಿಶಿನ
ಉಪ್ಪು
ಮಜ್ಜಿಗೆ
ಈರುಳ್ಳಿ
ಬೆಳ್ಳುಳ್ಳಿ
ಕಡಲೆಹಿಟ್ಟು
ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಒಗ್ಗರಣೆಗೆ ಎಣ್ಣೆ ಹಾಕಿ ನಂತರ ಅದಕ್ಕೆ ಸಾಸಿವೆ, ಜೀರಿಗೆ,ಅರಿಶಿನ, ಹಿಂಗು, ಮೆಣಸಿನಕಾಯಿ ಹಾಕಿ ಫ್ರೈ ಮಾಡಿ.
- ಬಳಿಕ ಅದಕ್ಕೆ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಈರುಳ್ಳಿ ಬೇಯುವಸ್ಟರಲ್ಲಿ ಒಂದು ಪಾತ್ರೆಯಲ್ಲಿ ಮಜ್ಜಿಗೆ ತಗೊಂಡು ಅದಕ್ಕೆ ಅಗತ್ಯಕ್ಕೆ ತಕ್ಕಂತೆ ಕಡಲೆ ಹಿಟ್ಟು ಬೆರೆಸಿ ಗಂಟು ಉಳಿಯದಂತೆ ಕಲಿಸಿಕೊಳ್ಳಿ.
- ನಂತರ ಬೆಂದಿರುವ ಈರುಳ್ಳಿಗೆ ಕಡಲೆಹಿಟ್ಟು ಮತ್ತು ಮಜ್ಜಿಗೆಯ ಮಿಶ್ರಣ ಹಾಗೂ ಉಪ್ಪು ಹಾಕಿ ಕುದಿಸಿಕೊಳ್ಳಿ.
- ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿದರೆ ಸಿದ್ದವಾಗುತ್ತದೆ ಮಜ್ಜಿಗೆ ಸಾರು