ಯಾವಾಗಲೂ ನೀವು ಮೂಸಂಬಿ ಜ್ಯೂಸ್ ಕುಡಿದಿರುತ್ತೀರಾ, ಮೂಸಂಬಿ ಪಾನಕ ಕುಡಿದಿರುವುದಿಲ್ಲ. ಒಮ್ಮೆ ಮೂಸಂಬಿ ಪಾನಕ ಕುಡಿದು ನೋಡಿ. ಬಹಳ ರುಚಿಯಾಗಿ ಮತ್ತು ಬಹಳ ಸಿಂಪಲ್ ಆಗಿ ಈ ಜ್ಯೂಸ್ ಮಾಡಬಹುದು.
ಬೇಕಾಗುವ ಸಾಮಗ್ರಿ:
ಮೂಸಂಬಿ
ಲಿಂಬು
ಸಕ್ಕರೆ
ಏಲಕ್ಕಿಪುಡಿ
ಮಾಡುವ ವಿಧಾನ:
ಮೊದಲಿಗೆ ಮೂಸಂಬಿಯ ರಸ ತೆಗೆದುಕೊಳ್ಳಿ. ಅದಕ್ಕೆ 1 ಚಮಚ ಲಿಂಬು ರಸ ಹಾಕಿ.
ನಂತರ ಅದಕ್ಕೆ ನೀರು ಮತ್ತು ರುಚಿಗೆ ತಕ್ಕಷ್ಟು ಸಕ್ಕರೆ, ಏಲಕ್ಕಿ ಪುಡಿ ಹಾಕಿದರೆ ಮೂಸಂಬಿ ಜ್ಯೂಸ್ ರೆಡಿ.