Friday, July 1, 2022

Latest Posts

ಯಾವಾಗಲೂ ಸ್ಪೂನ್ ನಲ್ಲಿಯೇ ಊಟ ಮಾಡ್ತೀರಾ? ಕೈಯಲ್ಲಿ ಊಟ ಮಾಡಿದರೆ ಏನೆಲ್ಲ ಲಾಭ ಇದೆ ಗೊತ್ತಾ?

ನಮ್ಮ ಬಾಲ್ಯದಲ್ಲಿ ನಾವೆಲ್ಲರೂ ಕೈ ಯಲ್ಲಿಯೇ ಊಟ ಮಾಡುತ್ತಿದ್ದೆವೂ ಆದರೆ ಈಗಿನ ಮಕ್ಕಳಿಗೆ ಸುಲಭವಾಗಿ ತಿನ್ನಲು ಸಾಧ್ಯವಾಗುವ ಸ್ಪೂನ್, ಫೋರ್ಕ್ ಗಳು ಕೈ ನಲ್ಲಿಊಟ ಮಾಡೋದನ್ನೆ ಮರಿಸಿಬಿಟ್ಟಿದೆ ಎಂದರೆ ತಪ್ಪಾಗಲಾರದು.

ನಮ್ಮ ಕೈಗಳ 5 ಬೆರಳುಗಳು ಪ್ರಪಂಚದ 5 ಅಂಶಗಳನ್ನು ತಿಳಿಸುತ್ತದೆ.  ತೋರು ಬೆರಳು-ಗಾಳಿ, ಮಧ್ಯ ಬೆರಳು- ಅಗ್ನಿ, ಹೆಬ್ಬೆರಳು- ಆಕಾಶ, ಉಂಗುರ ಬೆರಳು-ನೀರು, ಕೊನೆ ಬೆರಳು-ಭೂಮಿಯನ್ನು ಪ್ರತಿನಿಧಿಸುತ್ತದೆ.

ಪ್ರತಿ ದಿನ ಕೈ ಬೆರಳುಗಳಿಂದ ಆಹಾರ ಸೇವಿಸುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ?

ರಕ್ತ ಸಂಚಾರ ವೃದ್ಧಿ:  ಕೈ ಬೆರಳುಗಳನ್ನು ಉಪಯೋಗಿಸಿ ಊಟ ಮಾಡುವುದರಿಂದ ನಮ್ಮ ನರಗಳಿಗೆ ಉತ್ತೇಜನ ನೀಡಿ ತಕ್ತ ಸಂಚಾರ ವೃದ್ಧಿಯಾಗಲು ಸಹಕಾರಿಯಾಗಲಿದೆ.

ಜೀರ್ಣಕ್ರಿಯೆ ಉತ್ತಮವಾಗುತ್ತದೆ: ನಮ್ಮ ಕೈ ನಲ್ಲಿರುವ ಸೂಕ್ಷ್ಮಾಣುಗಳು ನಮ್ಮ ದೇಹದಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ತೂಕ ಇಳಿಕೆ:  ನಾವು ಕೈ ನಲ್ಲಿ ಊಟ ಮಾಡುವುದರಿಂದ ನಾವು ತಿನ್ನುವ ಆಹಾರದ ಬಗ್ಗೆ ಗಮನ ಹರಿಸುಯತ್ತೇವೆ ಹಾಗೂ ಇದು ನಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡಿ ನಮ್ಮ ದೇಹದಲ್ಲಿ ಹೆಚ್ಚಿನ ಕೊಬ್ಬಿನಂಶ ಸಂಗ್ರಹವಾಗುವುದನ್ನು ತಪ್ಪಿಸುತ್ತದೆ.

ಮಧುಮೇಹ: ಸ್ಪೂನ್ ಸಹಾಯದಿಂದ ಆಹಾರ ಸೇವಿಸುವವರು ಅತೀ ವೇಗವಾಗಿ ಊಟ ಮಾಡುತ್ತಾರೆ ಇದು ನಮ್ಮ ರಕ್ತದಲ್ಲಿ ಸಕ್ಕರೆ ಅಂಶವನ್ನು ವೃದ್ಧಿಸುತ್ತದೆ. ಹಾಗಾಗಿ ಕೈ ನಲ್ಲಿ ತಿನ್ನುವುದರಿಂದ ಸಕ್ಕರೆ ಅಂಶ ಜೀರ್ಣವಾಗಿ ಮಧುಮೇಹಿಗಳಿಗೆ ಆರೋಗ್ಯದಾಯಕವಾಗಿರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss