Friday, July 1, 2022

Latest Posts

ಯಾವಾಗ ನನ್ನನ್ನು ಜೆಡಿಎಸ್ ನಿಂದ ಉಚ್ಚಾಟಿಸುತ್ತಾರೋ ಎಂದು ಕಾಯುತ್ತಿದ್ದೇನೆ: ಜಿ.ಟಿ.ದೇವೇಗೌಡ

ಹೊಸ ದಿಗಂತ ವರದಿ, ಮೈಸೂರು:

ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಆರೋಪದ ಮೇಲೆ ನನ್ನನ್ನು ಜೆಡಿಎಸ್‌ನಿಂದ ಉಚ್ಚಾಟಿಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾಗಿ ಅವರು ಯಾವಾಗ ನನ್ನನ್ನು ಉಚ್ಚಾಟಿಸುತ್ತಾರೋ ಎಂದು ನಾನು ಕಾಯುತ್ತಿದ್ದೇನೆ
ಎಂದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ತಿರುಗೇಟು ನೀಡಿದರು.
ಬುಧವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದಾಗ ಇವರೆಲ್ಲಾ ಎಲ್ಲಿರುತ್ತಾರೆ
ಅಂತ ಗೊತ್ತು ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಾನು ಬೇರೆ ಪಕ್ಷಕ್ಕೆ ಹೋಗ್ತೇನೆ ಎಂದು ಕುಮಾರಸ್ವಾಮಿ ಹೇಳ್ತಾರೆ.
ಅವರಿಗೆ ಗೊತ್ತಿದ್ದರೆ ನಾನು ಯಾವ ಪಕ್ಷಕ್ಕೆ ಹೋಗುತ್ತೀನಿ ಅಂತ ಅವರೇ ಹೇಳಲಿ. ಮೈಸೂರಿಗೆ ಬಂದು ನನ್ನನ್ನ ಉಚ್ಚಾಟಿಸುತ್ತೇನೆ
ಎಂದಿದ್ದಾರೆ. ಯಾವಾಗ ಬಂದು ಉಚ್ಚಾಟಿಸುತ್ತಾರೋ ಅಂತ ಕಾಯ್ತಾ ಇದ್ದೇನೆ. ನನ್ನ ಪಕ್ಷ ಸಂಘಟನಾ ಸಾಮರ್ಥ್ಯ
ಕುಮಾರಸ್ವಾಮಿಗೆ ಗೊತ್ತಿಲ್ಲವೇ? ಎಂದು ಟಾಂಗ್ ಕೊಟ್ಟರು.

ಕುಮಾರ ಪರ್ವ ಕಾರ್ಯಕ್ರಮ ರೂಪಿಸಿದ್ದನ್ನ ಹೆಚ್.ಡಿ.ಕೆ.ಮರೆತಿದ್ದಾರೆ
ಪಕ್ಷ ಸಂಘಟನೆಗೆ ಆಸಕ್ತಿ ಇಲ್ಲದವರಿಗೆ ಹೇಗೆ ಹುದ್ದೆ ಕೊಡಲಿ ಎಂಬ ಹೆಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ,
ಕುಮಾರ ಪರ್ವ ಕಾರ್ಯಕ್ರಮ ರೂಪಿಸಿದ್ದನ್ನ ಹೆಚ್.ಡಿ.ಕುಮಾರಸ್ವಾಮಿ ಮರೆತಿದ್ದಾರೆ. ಕುಮಾರ ಪರ್ವದಿಂದಲೇ ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಯ್ತು. ಹೆಚ್.ಡಿ.ಕೆ ಸಿಎಂ ಆಗಬೇಕೆಂದವರಲ್ಲಿ ನಾನೇ ಮೊದಲಿಗ ಎಂದರು.

ದೇವೇಗೌಡರ ಮಾತು ಪಕ್ಷದಲ್ಲಿ ನಡೆಯುತ್ತಿಲ್ಲ
ಜೆಡಿಎಸ್ ಪಕ್ಷ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ್ರ ಹಿಡಿತದಿಂದ ಕೈ ತಪ್ಪಿದೆ, ದೇವೇಗೌಡರ ಮಾತನ್ನ ಮಕ್ಕಳು ಕೇಳುತ್ತಿಲ್ಲ.
ಮಕ್ಕಳ ಮಾತನ್ನ ದೇವೇಗೌಡರು ಕೇಳುವ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ಹೆಚ್.ಡಿ. ದೇವೇಗೌಡರ ಬಗ್ಗೆ ನಮಗೆ
ಅಪಾರ ಗೌರವ ಇದೆ. ಅವರು ನಮ್ಮನ್ನ ಬೆಳೆಸಿದವರು. ದೇವೇಗೌಡರಂತೆಯೇ ಸಿದ್ದರಾಮಯ್ಯ, ಬಿಎಸ್‌ವೈ ಬಗ್ಗೆ ಗೌರವಯುತವಾಗಿದ್ದೇನೆ.
ಆದರೆ ದೇವೇಗೌಡರ ಮಾತು ಪಕ್ಷದಲ್ಲಿ ನಡೆಯುತ್ತಿಲ್ಲ ಎಂಬ ಬೇಸರವಿದೆ ಎಂದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ನುಡಿಯೋದೆ ಒಂದು ನಡೆಯೋದೆ ಒಂದು ಕಿಡಿಕಾರಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss