ಯಾವಾಗ ಬೇಕಾದರೂ ಭಾರತಕ್ಕೆ ಮಲ್ಯ ಹಸ್ತಾಂತರ

0
29

ಹೊಸದಿಲ್ಲಿ: ದೇಶಭ್ರಷ್ಟ ಆರ್ಥಿಕ ಅಪರಾಧಿ ವಿಜಯ್ ಮಲ್ಯ ಅವರ ಹಸ್ತಾಂತರದ ಕುರಿತು ಎಲ್ಲಾ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಮುಂಬರುವ ದಿನಗಳಲ್ಲಿ ಯಾವಾಗ ಬೇಕಾದರೂ ಭಾರತಕ್ಕೆ ಅವರನ್ನು ಹಸ್ತಾಂತರಿಸಬಹುದು ಎಂದು ಸರ್ಕಾರಿ ಉನ್ನತ ಮೂಲಗಳು ತಿಳಿಸಿದೆ.

ಭಾರತಕ್ಕೆ ತಮ್ಮನ್ನು ಹಸ್ತಾಂತರಿಸುವುದನ್ನು ವಿರೋಧಿಸಿ ಮೇ 14ರಂದು ಬ್ರಿಟನ್ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಮೇಲ್ಮನವಿ ತಿರಸ್ಕೃತಗೊಂಡ ಹಿನ್ನಲೆ ಈ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಯಾವಾಗ ಬೇಕಾದರೂ ಮಲ್ಯಾರನ್ನು ಭಾರತಕ್ಕೆ ಕರೆತರಲಾಗುತ್ತದೆ ಎಂದು ಜಾರಿ ನಿರ್ದೇಶನಾಲಯ ಮೂಲಗಳು ಮಾಹಿತಿ ನೀಡಿದೆ.

ಬ್ರಿಟನ್ ನಿಂದ ಭಾರತಕ್ಕೆ ಮಲ್ಯ ಹಸ್ತಾಂತರ ಯಾವ ದಿನಾಂಕದಂದು ಆಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಯುಕೆ ಸುಪ್ರೀಂ ಕೋರ್ಟ್ ನಲ್ಲಿ ಮಲ್ಯ ಮೇಲ್ಮನವಿ ತಿರಸ್ಕೃತಗೊಂಡಿದ್ದು, ಹಸ್ತಾಂತರ ಕುರಿತು ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ನಾವು ಪೂರ್ಣಗೊಳಿಸಿದ್ದೇವೆ ಎಂದಿದ್ದಾರೆ.

17 ಬ್ಯಾಂಕ್ ಗಳಿಗೆ 9 ಸಾವಿರ ಕೋಟಿ ರೂ. ವಂಚನೆ: ಭಾರತ ಅತಿದೊಡ್ಡ ಮದ್ಯ ಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ನ ಮತ್ತು ಕಿಂಗ್ ಫಿಶರ್ ಏರ್ ಲೈನ್ಸ್ ನ್ನು ಸ್ಥಾಪಿಸಿದ್ದ ಮಾಜಿ ಸಂಸದ ಇದೀಗ 9 ಸಾವಿರ ಕೋಟಿ ರೂ. ಗಳ ವಂಚನೆ ಮತ್ತು ಹಣ ವರ್ಗಾವಣೆಯ ಆರೋಪ ಎದುರಿಸುತ್ತಿದ್ದಾರೆ. ವೈಯಕ್ತಿಕ ಕಾರಣಗಳ ನೆಪವೊಡ್ಡಿ ಮಲ್ಯ 2016ರ ಮಾರ್ಚ್ ನಲ್ಲಿ ಭಾರತವನ್ನು ತೊರೆದಿದ್ದರು. ವಿದೇಶಗಳಲ್ಲಿ ಸುಮಾರು 40 ಕಂಪನಿಗಳ ಪೂರ್ಣ ಅಥವಾ ಭಾಗಷಃ ಪಾಲನ್ನು ಪಡೆಯಲು ಮಲ್ಯ ಭಾರತದ ಕನಿಷ್ಠ 17 ಬ್ಯಾಂಕ್ ಗಳಲ್ಲಿ ಸಾಲ ಪಡೆದು ವಂಚಿಸಿದ್ದಾರೆ.

LEAVE A REPLY

Please enter your comment!
Please enter your name here