Thursday, August 11, 2022

Latest Posts

ಯಾವುದೇ ಕಾರಣಕ್ಕೂ ಕಾಯ್ದೆ ರದ್ದುಪಡಿಸಲ್ಲ ಎಂದ ಸರಕಾರ: ಕೇಂದ್ರ- ರೈತರ 8 ನೇ ಸುತ್ತಿನ ಮಾತುಕತೆ ವಿಫಲ

ಹೊಸ ದಿಗಂತ ಆನ್ ಡೆಸ್ಕ್:

ಕೇಂದ್ರ ಸರಕಾ ಜಾರಿ ತಂದ ನೂತನ ಕೃಷಿ ಮಸೂದೆ ವಿರೋಧಿಸಿ ರೈತರ ಪ್ರತಿಭಟನೆ ಮುಂದುವರಿದಿದ್ದು, ಇದೀಗ ಇಂದು ನಡೆದ ಕೇಂದ್ರ ಸರ್ಕಾರ ಹಾಗೂ ರೈತರ ನಡುವಿನ 8 ನೇ ಸುತ್ತಿನ ಮಾತುಕತೆ ವಿಫಲವಾಗಿದೆ.
ರೈತರು ಮೂರು ಕಾಯ್ದೆಗಳನ್ನು ಹಿಂಪಡೆದರೆ ಮಾತ್ರ ನಾವು ಮನೆಗಳಿಗೆ ಹಿಂದಿರುತ್ತೇವೆ. ಇಲ್ಲವಾದಲ್ಲಿ, ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಸರ್ಕಾರಕ್ಕೆ ಪ್ರತಿಭಟನಾಕಾರರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್​​​ನ ಹಲವು ಆದೇಶಗಳು ಕೃಷಿಯನ್ನು ರಾಜ್ಯ ವಿಷಯ ಎಂದು ಘೋಷಿಸಿವೆ. ಹಾಗಾಗಿ ಕೇಂದ್ರ ಸರ್ಕಾರ ಕೃಷಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಮಾತುಕತೆಗಳು ನಡೆದರೂ, ಸಮಸ್ಯೆ ಬಗೆಹರಿದಿಲ್ಲ. ಈಗಲೂ ನೀವು ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ. ದಯವಿಟ್ಟು ನಿಮ್ಮ ಸ್ಪಷ್ಟ ನಿರ್ಧಾರ ಏನೆಂಬುದನ್ನು ತಿಳಿಸಿದರೆ, ನಾವು ಹೋಗುತ್ತೇವೆ, ಸಮಯ ಯಾಕೆ ವ್ಯರ್ಥ ಮಾಡಬೇಕು ಎಂದು ರೈತ ಮುಖಂಡರು ಕೇಂದ್ರ ಸಚಿವರಿಗೆ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ನಾಯಕರು ಯಾವುದೇ ಕಾರಣಕ್ಕೂ ಕಾಯ್ದೆಗಳನ್ನು ರದ್ದುಗೊಳಿಸುವುದಿಲ್ಲ. ಈ ಪ್ರಸ್ತಾಪ ಹೊರತು ಪಡಿಸಿ ಮತ್ಯಾವುದೇ ಬೇಡಿಕೆ ಇದ್ದರೂ ಪೂರೈಸುತ್ತೇವೆ ಎಂದಿದ್ದಾರೆ. ಅಲ್ಲದೆ, ಜನವರಿ 15 ನೇ ತಾರೀಖು ಮತ್ತೊಂದು ಸುತ್ತಿನ ಮಾತುಕತೆ ನಡೆಸುವುದಾಗಿ ತಿಳಿದು ಬಂದಿದೆ.
ಇನ್ನು ಜನವರಿ 26 ರ ಗಣರಾಜ್ಯೋತ್ಸವದಂದು, ರೈತರು ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇತ್ತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 60 ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss