Tuesday, July 5, 2022

Latest Posts

ಯಾವುದೇ ಕಾರಣಕ್ಕೂ ಶಾಲೆಗಳ ಆರಂಭ ಬೇಡ: ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರಕ್ಕೆ ಸಲಹೆ

ಚಿಕ್ಕಮಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷವನ್ನು ಪರೀಕ್ಷಾ ರಹಿತ ವರ್ಷವೆಂದು ಘೋಷಣೆ ಮಾಡಬೇಕು. ಯಾವುದೇ ಕಾರಣಕ್ಕೂ ಶಾಲೆಗಳನ್ನು ಆರಂಭಿಸಬಾರದು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಮತ್ತು ರಾಜ್ಯದಲ್ಲಿ ನೂರಾರು ಜನರು ನಿರೀಕ್ಷೆಗೆ ಮೀರಿ ಕೊರೊನಾದಿಂದ ಸಾವಪ್ಪುತ್ತಿದ್ದಾರೆ. ಕೊರೊನಾ ವಾರಿಯರ್ಸ್‍ಗಳು ಬಲಿಯಾಗುತ್ತಿರುವ ಈ ಸಂದರ್ಭದಲ್ಲಿ ಮತ್ತೆ ಶಾಲೆಯನ್ನು ಆರಂಭಿಸುವ ಬಗ್ಗೆ ಹಾಗೂ ಶಿಕ್ಷಕರು ಶಾಲೆಗೆ ಹೋಗುವುದರ ಬಗ್ಗೆ ಚರ್ಚೆ ಆಗುತ್ತಿದೆ. ಆದರೆ ಈ ವರ್ಷ ಶಾಲೆಗಳನ್ನು ಆರಂಭಿಸುವುದು ಬೇಡ ಎನ್ನುವುದು ನನ್ನ ವಿನಂತಿ ಎಂದರು.
ಎಲ್ಲ ಶಿಕ್ಷಕರನ್ನು ಒಟ್ಟಿಗೆ ಕರೆಸುವಂತಾಗಬಾರದು. ಈಗಾಗಲೇ ರಾಜ್ಯ ಸೇರಿದಂತೆ ದೇಶದಾದ್ಯಂತ ಹಲವು ಶಿಕ್ಷಕರು ಸಾವಿಗೀಡಾಗಿದ್ದಾರೆ. ಶಿಕ್ಷಕರು ಸಹ ದೇಶದ ಆಸ್ತಿ. ಮಕ್ಕಳಿಗೂ ತೊಂದರೆಯಾಗಬಾರದು. ಒಂದು ಅಥವಾ ಎರಡು ಮಕ್ಕಳಿರುತ್ತಾರೆ. ಪೋಷಕರು ಅವರನ್ನು ಶಾಲೆಗೆ ಕಳುಹಿಸುವ ಮನಸ್ಥಿತಿಯಲ್ಲಿ ಈಗಿಲ್ಲ. ಅವರನ್ನು ಸಮಸ್ಯೆ ಅಥವಾ ಕಾಯಿಲೆಗೆ ದೂಡುವ ಮಾನಸಿಕತೆಯಲ್ಲಿ ಪೋಷಕರು ಇರುವುದಿಲ್ಲ ಎಂದರು.
ಶಿಕ್ಷಕರ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು. ಅವರ ಜೀವ ಉಳಿಸುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ಮಾರ್ಚ್‍ನಲ್ಲೇ ಮೊದಲು ಜೀವ ಉಳಿಸೋಣ. ನಂತರ ಜೀವನ ಮಾಡೋಣ ಎಂದು ಹೇಳಿದ್ದರು. 2020ರ ವರ್ಷ ಜೀವ ಉಳಿಸುವ ವರ್ಷ. ಮುಂದಿನ ಡಿಸೆಂಬರ್‍ವರೆಗೂ ಈ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss