ಬೀಜಿಂಗ್: ಭಾರತದ ಜೊತೆಗೆ ಚೀನಾ ಮುಸುಕಿನ ಗುದ್ದಾಟ ಮುಂದುವರಿಸಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿ ಎಂದು ತಮ್ಮ ಸೇನೆಗೆ ಖಡಕ್ ಸೂಚನೆ ನೀಡಿದ್ದಾರೆ. ತಮ್ಮ ಸೇನಾ ನಿಯೋಗದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಅವರು ಯಾವುದೇ ಸಂಕಷ್ಟದ ಸಂದರ್ಭವಾದರೂ ತನ್ನ ರಕ್ಷಣೆಗೆ ಬದ್ಧವಾಗಿದೆ. ಹಾಗಾಗಿ ಯಾವುದೇ ಪರಿಸ್ಥಿತಿ ಎದುರಿಸಲು ನಾವು ಸನ್ನದ್ಧರಾಗಬೇಕು ಎಂದು ಸೇನಾಪಡೆಗಳಿಗೆ ಮಾಡಿದ್ದಾರೆ. ಈ ನಡುವೆ ಗಡಿಭಾಗದಲ್ಲಿ ಚೀನಾ ಹಾಗೂ ಭಾರತದ ನಡುವೆ ಶೀತಲ ಸಮರ ಮುಂದುವರಿದಿದ್ದು ಆತಂಕದ ಸೃಷ್ಟಿ ಇನ್ನೂ ಮುಂದುವರೆದಿದೆ.