ಸಣ್ಣ ಇರುವವರಿಗೆ ಯಾವ ಬಟ್ಟೆ ಹಾಕಿದರೂ ಸಣ್ಣ ಕಾಣುತ್ತೀವಿ ಎನ್ನುವ ಚಿಂತೆ. ಇನ್ನು ದಪ್ಪಗಿರುವವರಿಗೆ ಎಂಥ ಚಂದದ ಬಟ್ಟೆ ಹಾಕಿದರೂ ದಪ್ಪ ಕಾಣುತ್ತೇವೆ ಎನ್ನುವ ಚಿಂತೆ. ಹಾಗಾದರೆ ಯಾವ ರೀತಿ ಬಟ್ಟೆ ಹಾಕಬೇಕು? ಕೆಲವರು ದಪ್ಪ ಇದ್ದರೂ ಅವರ ಬಟ್ಟೆಗಳಲ್ಲಿ ಸಣ್ಣ ಕಾಣುತ್ತಾರೆ. ಏಕೆಂದರೆ ಅವರಿಗೆ ಯಾವ ರೀತಿ ಬಟ್ಟೆ ಹಾಕಬೇಕು ಎಂದು ತಿಳಿದಿದೆ. ಅವರು ಹೇಗೆ ಬಟ್ಟೆ ಆರಿಸುತ್ತಾರೆ ನೋಡೋಣ ಬನ್ನಿ..
- ಸ್ಲಿಮ್ವೇರ್: ಪ್ರತಿದಿನ ಸ್ಲಿಮ್ವೇರ್ ಬಳಸಿ ಎಂದು ಹೇಳುವುದಿಲ್ಲ. ಆದರೆ ಅಕೇಶನ್ ಇರುವಾಗ, ಫೋಟೊಶೂಟ್ ಸಮಯದಲ್ಲಿ ಹೀಗೆ ಸ್ಪೆಶಲ್ ಸಮಯಗಳಲ್ಲಿ ಸ್ಲಿಮ್ವೇರ್ ಬಳಸಿ. ಇದನ್ನು ಬಳಸುವುದರಿಂದ ದೇಹ ಏಕ ಕಾಣುತ್ತದೆ.
- ಹೈ ವೇಸ್ಟ್ ಜೀನ್ಸ್: ಲೋ ವೇಸ್ಟ್ ಅಥವಾ ಮಿಡಲ್ ರೈಸ್ ಪ್ಯಾಂಟ್ ಬದಲು ಹೈ ರೈಸ್ ಪ್ಯಾಂಟ್ ಕೊಳ್ಳಿ. ಇದರಿಂದ ಹೊಟ್ಟೆಯ ಭಾಗದ ಫ್ಯಾಟ್ ಕಾಣುವುದಿಲ್ಲ. ಸ್ವಲ್ಪ ಸಣ್ಣಗೆ ಕಾಣುತ್ತೀರಿ. ಕ್ರಾಪ್ ಟಾಪ್ ಕೂಡ ಬಳಸಬಹುದು.
- ಸರಿಯಾದ ಇನ್ನರ್ವೇರ್: ಸರಿಯಾದ ಇನ್ನರ್ವೇರ್ ಹಾಕದೆ ಎಂಥ ಬಟ್ಟೆ ಹಾಕಿದರೂ ಚೆನ್ನಾಗಿ ಕಾಣುವುದಿಲ್ಲ. ಹಾಗಾಗಿ ನಿಮ್ಮ ಸೈಝ್ಗೆ ತಕ್ಕಂತಹ ಒಳಉಡುಪು ಧರಿಸಿ. ಅದು ಸರಿಯಾಗಿದ್ದರೆ ಮೇಲೆ ಎಲ್ಲವೂ ಸರಿಯಾಗಿ ಕಾಣುತ್ತದೆ. ಸೈಜ್ಗೆ ಸರಿಹೊಂದ ಇನ್ನರ್ವೇರ್ಗಳಿಂದಲೂ ನೀವು ದಪ್ಪ ಕಾಣಬಹುದು.
- ಸರಿಯಾದ ಆಕ್ಸೆಸರೀಸ್: ಕಿವಿಗೆ ಹಾಕುವ ರಿಂಗ್, ಸರ, ಕೈಗೆ ಹಾಕುವ ಬ್ರೇಸ್ಲೈಟ್ ವಾಚ್ ಇವುಗಳು ಕೂಡ ತುಂಬಾನೇ ಮುಖ್ಯ. ಇವುಗಳು ಚೆನ್ನಾಗಿದ್ದರೆ ನಿಮ್ಮ ದೇಹದ ಮೇಲೆ ಗಮನ ಹೋಗುವುದಿಲ್ಲ. ಆಗ ನೀವು ಸಣ್ಣ ಎನಿಸುತ್ತೀರ.
- ಪ್ಯಾಟರ್ನ್ಸ್: ಆದಷ್ಟು ಪ್ಲೇನ್ ಬಟ್ಟೆಗಳನ್ನು ತೆಗೆದುಕೊಳ್ಳಬೇಡಿ. ಇದರಲ್ಲಿ ದೇಹ ಹೇಗಿದೆಯೋ ಹಾಗೆ ಕಾಣುತ್ತದೆ. ಇನ್ನು ಪ್ರಿಂಟ್ಸ್ , ಪ್ಯಾಟರ್ನ್ಸ್ ಹಾಕಿದರೆ ಅದರಲ್ಲಿ ದೇಹ ದಪ್ಪ ಕಾಣುವುದಿಲ್ಲ. ಹಾಗಾಗಿ ಪ್ರಿಂಟ್ಸ್ ಬಟ್ಟೆಯನ್ನೇ ಹಾಕಿ.
- ಡಾರ್ಕ್ ಬಟ್ಟೆ: ತಿಳಿ ಬಣ್ಣಗಳಿಗಿಂತ ಡಾರ್ಕ್ ಬಟ್ಟೆಗಳನ್ನು ಹಾಕಿ. ಈ ರೀತಿ ಹಾಕುವುದರಿಂದಲೂ ದೇಹದ ಭಾಗಗಳು ಹೆಚ್ಚು ಕಾಣುವುದಿಲ್ಲ. ಆಗ ನೀವು ದಪ್ಪ ಎನಿಸುವುದಿಲ್ಲ. ಲೈಟ್ ಕಲರ್ ಜೀನ್ಸ್ ಬದಲು ಡಾರ್ಕ್ ಜೀನ್ಸ್ ಟೀ ಶರ್ಟ್ಸ್ ಬಳಸಿ ಆಗ ನೀವು ಸಣ್ಣ ಕಾಣುತ್ತೀರಿ.
- ಉದ್ದ ಲೈನ್ಸ್: ಅಡ್ಡ ಲೈನ್ಸ್ ಇರುವ ಬಟ್ಟೆ ಕೊಳ್ಳಬೇಡಿ. ಇದರಿಂದ ಇರುವುದಕ್ಕಿಂತ ಹೆಚ್ಚು ದಪ್ಪ ಕಾಣುತ್ತೀರಿ. ಉದ್ದ ಲೈನ್ಸ್ ಇರುವ ಬಟ್ಟೆಗಳನ್ನೇ ಹಾಕಿ. ಇದರಿಂದ ಸ್ವಲ್ಪ ಸಣ್ಣ ಕಾಣುತ್ತೀರಿ.