Thursday, August 11, 2022

Latest Posts

ಯುಎಇಯಿಂದ ಗಡಿಪಾರು ಮಾಡಿದ ಏಳು ಮಂದಿ ಕಾಸರಗೋಡು ನಿವಾಸಿಗಳ ಸಮಗ್ರ ತನಿಖೆ ನಡೆಸಿದ ಎನ್‌ಐಎ

ಹೊಸ ದಿಗಂತ ವರದಿ, ಕಾಸರಗೋಡು:

ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದಕ ಸಂಘಟನೆಯಾದ ಐಎಸ್‌ಗೆ ಸೇರಿದವರೊಂದಿಗೆ ನಂಟು ಹೊಂದಿದ್ದಾರೆಂಬ
ಆರೋಪದಂತೆ ಗಲ್ಫ್ ರಾಷ್ಟ್ರ ಯುಎಇಯಿಂದ ಗಡಿಪಾರು ಮಾಡಿದ ಏಳು ಮಂದಿ ಕೇರಳೀಯರನ್ನು ಎನ್‌ಐಎ ಸಮಗ್ರ
ತನಿಖೆಗೊಳಪಡಿಸಿದೆ ಎಂದು ತಿಳಿದು ಬಂದಿದೆ.
ಕಾಸರಗೋಡು ಜಿಲ್ಲೆಯ ತೃಕ್ಕರೀಪ್ಪುರ ಮತ್ತು ಪಡನ್ನ ನಿವಾಸಿಗಳಾದ ಈ ಏಳು ಮಂದಿಯನ್ನು ಎನ್‌ಐಎ ಕೊಚ್ಚಿ ಬ್ಯೂರೋಗೆ ಕರೆಸಿ ತನಿಖೆಗೊಳಪಡಿಸಲಾಗಿದೆ. ಇವರ ಪಾಸ್‌ಪೋರ್ಟ್ ಸಹಿತ ಎಲ್ಲಾ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಐಎಸ್‌ಗೆ ಸೇರ್ಪಡೆಗೊಂಡ ಕಾಸರಗೋಡು ಜಿಲ್ಲೆಯ ನಿವಾಸಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಯುಎಇಯಲ್ಲಿ ಸೆರೆಗೀಡಾದ ಈ ಏಳು ಮಂದಿಯನ್ನು ಎನ್‌ಐಎ ತಂಡವು ತನಿಖೆಗಾಗಿ ಕರೆಸಿಕೊಂಡಿದೆ. ಯುಎಇಯಲ್ಲಿ ಜೈಲು ಶಿಕ್ಷೆ ಅನುಭವಿಸಿದ
ಇವರನ್ನು 2020ನೇ ಅಕ್ಟೋಬರ್ ತಿಂಗಳಲ್ಲಿ ಅಲ್ಲಿಂದ ಗಡಿಪಾರು ಮಾಡಲಾಗಿತ್ತು. ಅನಂತರ ಪೊಲೀಸರು ಹಾಗೂ ಇಂಟೆಲಿಜೆನ್ಸ್ ವಿಭಾಗಗಳು ಇವರ ಕುರಿತು ಮಾಹಿತಿ ಸಂಗ್ರಹಿಸಿದ್ದವು. ಇದರ ಬೆನ್ನಲ್ಲೇ ಎನ್‌ಐಎ ತಂಡವು ಈ 7 ಮಂದಿಯನ್ನು ತನಿಖೆಗೊಳಪಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss