Wednesday, August 10, 2022

Latest Posts

ಯುಎಇ ನಲ್ಲಿ ಸೆ. 19 ರಿಂದ ನ. 10ರವರೆಗೆ ಐಪಿಎಲ್ ನಡೆಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್!

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ನಡೆಯುವುದು ಪಕ್ಕಾ .
ಭಾನುವಾರ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈ ಗೊಳ್ಳಲಾಗಿದೆ. ದೇಶದ ಹೊರಗೆ ಟೂರ್ನಿಯನ್ನು ಆಯೋಜಿಸಲು ಕೇಂದ್ರ ಸರ್ಕಾರದಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಪ್ಪಿಗೆ ಪಡೆದಿದೆ.
ಬದಲಿ ಆಟಗಾರನ ಸೇರ್ಪಡೆಗೆ ಅವಕಾಶವಿದ್ದು, ಅಕಸ್ಮಾತ್‌ ಪಂದ್ಯದ ವೇಳೆ ಆ ದಿನದ ಪ್ಲೇಯಿಂಗ್ 11 ತಂಡದಲ್ಲಿರುವ ಆಟಗಾರನಲ್ಲಿ ಕೋವಿಡ್ 19 ಪಾಸಿಟಿವ್‌ ದೃಢಪಟ್ಟಲ್ಲಿ ಬದಲಿ ಆಟಗಾರನನ್ನು ಆಡಿಸುವ ನಿರ್ಧಾರಕ್ಕೆ ಬರಲಾಯಿತು.
ನ. 10ರಂದು ಫೈನಲ್‌ ಪಂದ್ಯವನ್ನು  ನಡೆಸಲು ತೀರ್ಮಾನಿಸಲಾಗಿದೆ.
ತಂಡವೊಂದರ ಆಟಗಾರರ ಸಂಖ್ಯೆಯನ್ನು 24ಕ್ಕೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಆಟಗಾರರೆಲ್ಲ ಪ್ರತ್ಯೇಕ ಖಾಸಗಿ ವಿಮಾನಗಳಲ್ಲಿ ಆ. 26ರ ಒಳಗೆ ಯುಎಇ ತಲುಪಬೇಕಿದೆ.
ಯುಎಇನಲ್ಲಿ ಟೂರ್ನಿಯನ್ನು ಆಯೋಜಿಸಲಾಗಿದರೂ ಎಲ್ಲ ಸಂಜೆ ಪಂದ್ಯಗಳು ಸಂಜೆ 7.30ಕ್ಕೆ ಆರಂಭವಾಗಲಿವೆ. ಬಿಸಿಸಿಐ ಲಾಜಿಸ್ಟಿಕ್ಸ್ ಅನ್ನು ಶೂನ್ಯಗೊಳಿಸಿದೆ ಮತ್ತು ಸಂಪೂರ್ಣ ಸ್ಟ್ಯಾಂಡರ್ಡ್ ಆಪರೇಷನ್ ಪ್ರೊಸೀಜರ್ (ಎಸ್‌ಒಪಿ) ಕೈಪಿಡಿಯನ್ನು ಸಿದ್ಧಪಡಿಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss