ಶಿವಮೊಗ್ಗ: ಮಂಗಳವಾರ ಪ್ರಕಟವಾದ ಯುಪಿಎಸ್ಸಿ ಫಲಿತಾಂಶದಲ್ಲಿ ಜಿಲ್ಲೆಯ ಇಬ್ಬರು ಯುವಕರು ರಾಂಕ್ ಗಳಿಸಿದ್ದಾರೆ. ಸಮೀಪದ ಸಂತೆಕಡೂರಿನ ಕೃಷಿ ಕುಟುಂಬದ ಹಿನ್ನೆಲೆಯ ಪೃಥ್ವಿ ಹುಲ್ಲತ್ತಿ 582 ನೇ ರ್ಯಾಂಕ್ ಪಡೆದಿದ್ದಾರೆ. ಎರಡನೇ ಪ್ರಯತ್ನದಲ್ಲೇ ಅವರಿಗೆ ಈ ಯಶಸ್ಸು ದೊರೆತಿದೆ.
ಶಿವಮೊಗ್ಗದಲ್ಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದಿದ್ದಾರೆ ಪೃಥ್ವಿ. ಇಲ್ಲಿನ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಅರಬಿಂದೋ ಕಾಲೇಜಿನಲ್ಲಿ ಪಿಯುಸಿ, ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದ್ದರು.
‘ನನ್ನ ರ್ಯಾಂಕ್ ಐಆರ್ ಎಸ್ ವ್ಯಾಪ್ತಿಯಲ್ಲಿ ಬರಬಹುದು. ಇದಕ್ಕಿಂತ ಹೆಚ್ಚಿನ ರ್ಯಾಂಕ್ ಗಳಿಸಲು ಪುನಃ ಯತ್ನಿಸುತ್ತೇನೆ ಎಂದು ಪೃಥ್ವಿ ತಿಳಿಸಿದ್ದಾರೆ.
ಚಂದನ್ ಗೆ 777 ನೇ ರ್ಯಾಂಕ್
ಗೋಪಾಳ 100 ಅಡಿ ರಸ್ತೆ ನಿವಾಸಿಯಾಗಿರುವ ಚಂದನ್ 777 ರ್ಯಾಂಕ್ ಗಳಿಸಿದ್ದಾರೆ. ಇದು ಅವರ ಸತತ 3 ನೇ ಪ್ರಯತ್ನವಾಗಿತ್ತು.
ಇವರ ತಂದೆ ಲೋಕೋಪಯೋಗಿ ಇಲಾಖೆ ಸೂಪರಿಡೆಂಟ್ ಇಂಜಿನಿಯರ್ ಶ್ರೀನಿವಾಸ್, ತಾಯಿ ನೀಲಾ ಗೃಹಿಣಿಯಾಗಿದ್ದಾರೆ.
ಶಿವಮೊಗ್ಗದಲ್ಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಂದನ್ ಪಡೆದಿದ್ದಾರೆ. ಇಲ್ಲಿನ ಮಂದಾರ ಜ್ಞಾನದಾಯಿನಿ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಅರಬಿಂದೋ ಪಿಯು ಕಾಲೇಜಿನಲ್ಲಿ ಪಿಯುಸಿ ತೇರ್ಗಡೆ ಹೊಂದಿದ ಇವರು ಬೆಂಗಳೂರಿನ ಬಿಎನ್ಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದುಕೊಂಡಿದ್ದಾರೆ.