ಕೊಪ್ಪಳ: ಕೊಪ್ಪಳ ಜಿಲ್ಲೆಯ ಇಬ್ಬರು ಯುವಕರು ಪ್ರಸಕ್ತ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಜಿಲ್ಲೆಗೆ ಕಿರ್ತಿ ತಂದಿದ್ದಾರೆ.
ಗಂಗಾವತಿಯ ಹೆಚ್. ಮಲ್ಲಿಕಾರ್ಜುನಗೌಡ ಅವರ ಪತ್ರ ವಿನೋದ್ ಪಾಟೀಲ್ ಯುಪಿಎಸ್ಸಿ ಪರೀಕ್ಷೆಯಲ್ಲಿ 132ನೇ ರ್ಯಾಂಕ್ ಗಳಿಸಿದ್ದು, ರಾಜ್ಯದಲ್ಲಿ 2ನೇ ಸ್ಥಾನ ಗಳಿಸಿದ್ದಾರೆ. ಹಾಗೆಯೇ ಕುಷ್ಟಗಿ ತಾಲೂಕಿನ ಕಂದಕೂರ ಗ್ರಾಮದ ರಮೇಶ ಗುಮಗೇರಿ ಎಂಬ ಯುವಕ 646 ರಾಂಕ್ ಗಳಿಸಿದ್ದು ರಾಜ್ಯದಲ್ಲಿ 33ನೇ ಸ್ಥಾನ ಗಳಿಸಿದ್ದಾನೆ.
ಒಟ್ಟಾರೆ ಯುಪಿಎಸ್ಸಿ ಪರೀಕ್ಷೆಯ 800 ರಾಂಕ್ಗಳಲ್ಲಿ ರಾಜ್ಯದ 36 ಜನರು ತೇರ್ಗಡೆ ಹೊಂದಿದ್ದು, ಕೊಪ್ಪಳ ಜಿಲ್ಲೆಯ ಗಂಗಾವತಿಯ ಹಾಗೂ ಕುಷ್ಟಗಿ ತಾಲೂಕಿನ ಇಬ್ಬರು ಯುವಕರು ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಗಳಿಸಿರುವುದು ಜಿಲ್ಲೆಯ ಕಿರ್ತಿಯನ್ನು ಹೆಚ್ಚಿಸಿದ್ದಾರೆ.
ಇವರ ಸಾಧನೆಗೆ ಜಿಲ್ಲೆಯ ಅನೇಕ ಯುವಕರು ಹಾಗೂ ವಿದ್ವಾಂಶರು ಹರ್ಷ ವ್ಯಕ್ತಿಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.