ಚಿಕ್ಕಮಗಳೂರು: ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಜಿಲ್ಲೆಯ ಗ್ರಾಮೀಣ ಪ್ರತಿಭೆ ಬಿ.ಯಶಸ್ವಿನಿ ಯುಪಿಎಸ್ಸಿ ಫಲಿತಾಂಶಲ್ಲಿ
71ನೇ ರ್ಯಾಂಕ್ ಪಡೆದು ಕೀರ್ತಿ ತಂದಿದ್ದಾರೆ. ಕಡೂರು ತಾಲ್ಲೂಕಿನ ಬಾಣೂರು ಗ್ರಾಮದ ಯಶಸ್ವಿನಿ ಈ ಬಾರಿ ಕರ್ನಾಟಕಕ್ಕೆ ಟಾಪರ್ ಆಗಿದ್ದಾರೆ. ಸಖರಾಯಪಟ್ಟಣ ಸಮೀಪದ ಗುಬ್ಬಿಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಎಸ್. ಬಸವರಾಜಪ್ಪ ಪಿ.ವಿ.ಇಂದಿರಾ ದಂಪತಿಗಳ ಏಕೈಕ ಪುತ್ರಿ ಬಿ.ಯಶಸ್ವಿನಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಬಾಣೂರಿನಲ್ಲಿ ಮುಗಿಸಿ, ಪ್ರೌಢಶಾಲೆಯನ್ನು ಕಡೂರು ಪಟ್ಟಣದ ದೀಕ್ಷಾ ವಿದ್ಯಾಮಂದಿರದಲ್ಲಿ ಶಾಲೆಯಲ್ಲಿ ಓದಿದ್ದಾಳೆ. ನಂತರ ಶಿವಮೊಗ್ಗದ ಜ್ಞಾನದೀಪ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದು, ತದ ನಂತರ ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾಳೆ.
ದೆಹಲಿಯ ವಾಜಿರಾಂ ಆಂಡ್ ರವಿ ಇನ್ಸ್ಟ್ಯೂಟ್ ನಲ್ಲಿ ತರಬೇತಿ ಪಡೆದು ಸಧ್ಯ ಇಂಡಿಯನ್ ಡಿಫೆನ್ಸ್ ಎಸ್ಟೇಟ್ ಸರ್ವೀಸ್ನಲ್ಲಿ ಉದ್ಯೋಗಿಯಾಗಿದ್ದಾರೆ.