ತುಮಕೂರು: ಜಿಲ್ಲೆಯ ಹೆಬ್ಬೂರು ಹೋಬಳಿ ಕಣಕುಪ್ಪೆಯ ಬಿ.ಸಿ.ಹರೀಶ್ ಅವರು 2019ನೇ ಸಾಲಿನ ಯುಪಿಎಸ್ ಸಿ ಪರೀಕ್ಷೆಯಲ್ಲಿ 409ನೇ ರ್ಯಾಂಕ್ ಗಳಿಸಿದ್ದಾರೆ. ಹೆಬ್ಬೂರು ಜಿಲ್ಲಾಪಂಚಾಯತ್ ಸದಸ್ಯರಾಗಿದ್ದರು ಚಿಕ್ಕವೆಂಕಟಯ್ಯ ಮತ್ತು ಚಿಕ್ಕಮ್ಮನೂ ಅವರ ಹಿರಿಯ ಪುತ್ರ. ವಿದ್ಯಾನಿಕೇತನದಲ್ಲಿ ಪ್ರೌಢಶಿಕ್ಷಣ ಪಡೆದಿದ್ದ ಅವರು ಸರ್ವೋದಯ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿದ್ದು.ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ 2011ರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ಸ್ ನಲ್ಲಿ ಬಿ.ಇ.ವಿದ್ಯಾಭ್ಯಾಸ ಮಾಡಿದ್ದರು.