ಹೊಸದಿಗಂತ ಆನ್ ಲೈನ್ ಡೆಸ್ಕ್:
ಅತ್ಯಾಚಾರ ಎಂದ ಕೂಡಲೇ ನೆನಪಾಗೋದು ಹೆಣ್ಣು ಮಕ್ಕಳು, ಮಹಿಳೆಯರು ಮತ್ತು ವೃದ್ಧೆಯರು.. ಆದರೆ ಇತ್ತೀಚಿನ ದಿನಗಳು ಗಂಡು ಮಕ್ಕಳಿಗೂ ಸೇಫ್ ಅಲ್ಲ ಅನ್ನೋದು ಪದೇ ಪದೇ ಒತ್ತಿ ಹೇಳುತ್ತಿದೆ.
ಹೌದು, 19 ವರ್ಷದ ಯುವಕನ ಮೇಲೆ ನಾಲ್ಕು ಮಂದಿ ಕಾಮುಕರು ಅತ್ಯಾಚಾರ ವೆಸಗಿರುವ ಘಟನೆ ಮುಂಬೈನ ಥಾಣೆಯಲ್ಲಿ ನಡೆದಿದೆ.
ಗುಜರಾತ್ ನಲ್ಲಿ ಮಾಡಲ್ ವೃತ್ತಿಯಲ್ಲಿದ್ದ ಯುವಕ, ಚಿತ್ರರಂಗಕ್ಕೆ ಸೇರುವ ಗುರಿ ಹೊಂದಿದ್ದ. ಫೇಸ್ ಬುಕ್ ನಲ್ಲಿ ಪುನೀತ್ ಶುಕ್ಲ ಎಂಬಾತನ ಪರಿಚಯವಾಗಿದ್ದು, ಕೆಲಸ ಕೊಡಿಸುವುದಾಗಿ ನಂಬಿಸಿ ಯುವಕನನ್ನು ಮುಂಬೈಗೆ ಕರಿಸಿಕೊಂಡು ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ.
ಅಷ್ಟೇ ಅಲ್ಲದೆ ಕಾಮುಕರು ರೇಪ್ ಮಾಡಿದ್ದನ್ನು ವಿಡಿಯೋ ಮಾಡಿದ್ದು, ಅತ್ಯಾಚಾರಕ್ಕೆ ವಿರೋಧಿಸಿದ ಯುವಕನಿಗೆ ಹೊಡೆದು ಹಿಂಸೆ ಕೊಟ್ಟಿದ್ದಾರೆ.
ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ರೇಪ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಯುವಕ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಈಗಾಗಲೇ ಘಟನೆಯ ಪ್ರಮುಖ ಆರೋಪಿ ಶುಕ್ಲಾ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.