ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಅಸ್ತು ಎಂದ ಆರ್.ಬಿ.ಐ, ನೂತನ ಆಡಳಿತ ಮಂಡಳಿ

0
144

ಹೊಸದಿಲ್ಲಿ: ಯೆಸ್ ಬ್ಯಾಂಕ್ ಮೇಲಿರುವ ನಿರ್ಬಂಧವನ್ನು ಸರ್ಕಾರ 18ರಂದು ಹಿಂಪಡೆಯಲಿದೆ. ಶೇ. 49ರಷ್ಟು ಷೇರುಗಳನ್ನು ಎಸ್.ಬಿ.ಐ ಕರೀದಿಸಲಿದ್ದು, ಮೂರು ವರ್ಷಗಳಕಾಲ ಅದರ ಷೇರುಗಳನ್ನು ಶೇ.26ಕ್ಕಿಂತಲೂ ಕಡಿಮೆ ಹೊಂದಿರುವಂತಿಲ್ಲ ಎನ್ನುವ ನಿರ್ಬಂಧ ಇರುತ್ತದೆ. ಬ್ಯಾಂಕಿನ ಇತರೆ ಹೂಡಿಕೆದಾರರು ಶೇ.75 ರಷ್ಟು ಮೊತ್ತಮನ್ನುಮೂರುವರ್ಷಗಳ ಕಾಲ ಹಿಂಪಡಿಯುವಂತಿಲ್ಲ.

ಬ್ಯಾಂಕ್ ಗಳ ಗ್ರಾಹಕರ ಮತ್ತು ಠೇವಣಿದಾರರನ್ನು ರಕ್ಷಿಸುವ ಸಲುವಾಗಿ ಯೆಸ್ ಬ್ಯಾಂಕ್ ಮತ್ತು ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮತ್ತು ಹಣಕಾಸು ಸ್ಥಿತಿಯನ್ನು  ಸ್ಥಿರತೆಗೆ ತರುವಲ್ಲಿ ಸರ್ಕಾರ ಪುನಶ್ಚೇತನದ ನಿರ್ಧಾರ ಕೈಗೊಂಡಿದೆ. ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಅಧಿಸೂಚನೆಗಳು ಬಂದ ಮೂರು ದಿನಗಳಲ್ಲಿ ಬ್ಯಾಂಕ್ ನ ವಹಿವಾಟುಗಳ ಮೇಲಿನ ನಿರ್ಬಂಧವನ್ನು ತೆಗೆಯಲಾಗುತ್ತದೆ. ಹಾಗೂ ಏಳು ದಿನಗಳಲ್ಲಿ ಹೊಸ ನಿರ್ದೇಶಕ ಮಂಡಳಿ ರಚನೆಯಾಗಲಿದೆ.
ಹೊಸ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ಸುನಿಲ್ ಮೆಹ್ತಾ, ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಮಹೇಶ್ ಕೃಷ್ಣ ಮೂರ್ತಿ ಹಾಗೂ ಅತುಲ್ ಭೇಡಾ ಕಾರ್ಯ ನಿರ್ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here