Saturday, June 25, 2022

Latest Posts

ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ವಿರುದ್ಧ ಎಫ್ಐಆರ್: ರಾಷ್ಟ್ರೀಯ ತನಿಖಾ ದಳ

ಹೊಸದಿಲ್ಲಿ: ಯೆಸ್ ಬ್ಯಾಂಕ್ ಸಂಸ್ಥಾಪಕ ಹಾಗೂ ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಣಾ ಕಪೂರ್ ಮತ್ತು ,ಡಿಹೆಚ್ಎಫ್ಎಲ್, ಡುಇಟ್ ಅರ್ಬನ್ ವೆಂಚರ್ಸ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ರಾಣಾ ಕಪೂರ್ ಮತ್ತು ಡಿಹೆಚ್ಎಫ್ಎಲ್, ಡುಇಟ್ ಅರ್ಬನ್ ವೆಂಚರ್ಸ್ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಸಂಚು, ವಂಚನೆ ಮತ್ತು ಭ್ರಷ್ಟಾಚಾರದ ಆರೋಪದಡಿ ರಾಷ್ಟ್ರೀಯ ತನಿಖಾ ದಳ ಪ್ರಕರಣ ದಾಖಲಿಸಿಕೊಂಡಿದೆ.

ರಾಣಾ ಕಪೂರ್, ತಮ್ಮ ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ ‘ಡುಇಟ್ ಅರ್ಬನ್ ವೆಂಚರ್ಸ್’ ಎಂಬ ಕಂಪನಿ ಸ್ಥಾಪಿಸಿದ್ದರು. ಯೆಸ್ ಬ್ಯಾಂಕ್ ಡಿಹೆಚ್ಎಫ್ಎಲ್ ಕಂಪನಿಗೆ ರೂ.3000 ಕೋಟಿ ಸಾಲ ನೀಡಿತ್ತು. ಇದರ ಪ್ರತಿಯಾಗಿ ಡುಇಟ್ ಅರ್ಬನ್ ವೆಂಚರ್ಸ್ ಎಂಬ ಕಂಪನಿಗೆ ಡಿಹೆಚ್ಎಫ್ಎಲ್ ರೂ.600 ಕೋಟಿ ಲಂಚದ ಹಣವನ್ನು ನೀಡಿದೆ ಎಂದು ಸಿಬಿಐ ಎಲ್ಲರ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ರಾಣಾ ಕಪೂರ್ ಮತ್ತು ಕುಟುಂಬದವರನ್ನು ದೇಶ ಬಿಡದಂತೆ ಸೂಚಿಸಿದ್ದರೂ, ರಾಣಾ ಕಪೂರ್ ಅವರ ಪುತ್ರಿ ರೋಶನಿ, ಭಾನುವಾರ ಮುಂಬೈನಿಂದ ಲಂಡನ್’ಗೆ ತೆರಳಲು ಯತ್ನಿಸುತ್ತಿದ್ದ ವೇಳೆ, ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ ಎಂದು ವರದಿಗಳು ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss