ಬೆಂಗಳೂರು: ಯೋಗಿ ಆದಿತ್ಯನಾಥ್ ಸರ್ಕಾರ ಸಂಸ್ಕಾರಯುತ ಭಾರತ ದೇಶಕ್ಕೆ ಕಪ್ಪು ಚುಕ್ಕೆ ತಂದುಕೊಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ದಲಿತ ಯುವತಿ ಅತ್ಯಾಚಾರ ಪ್ರಕರಣ ಎಂದಲ್ಲ ಇದು ಮಾನವ ಕುಲಕ್ಕೆ ಆಗಿರುವ ಅವಮಾನ ಎಂದಿದ್ದಾರೆ.
ಯುವತಿಯ ಅಂತ್ಯಸಂಸ್ಕಾರವನ್ನು ಆತುರದಲ್ಲಿ ಮಾಡಿದ್ದಾರೆ. ಕನಿಷ್ಟಪಕ್ಷ ಗೌರವಯುತವಾಗಿ ಅಂತ್ಯಸಂಸ್ಕಾರವನ್ನೂ ಮಾಡಲಾಗದ ಸರ್ಕಾರದ ಬಗ್ಗೆ ಏನು ಹೇಳಲು ಸಾಧ್ಯ? ಇಂಥ ಸರ್ಕಾರದಿಂದ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದಿದ್ದಾರೆ.