Thursday, July 7, 2022

Latest Posts

ಯೋಗಿ ಆದಿತ್ಯನಾಥ ವಿರುದ್ಧ ಮಿಥುನ್ ರೈ ಅವಹೇಳನಕಾರಿ ಹೇಳಿಕೆ: ಬಹಿರಂಗ ಕ್ಷಮೆ ಯಾಚಿಸಲು ನಾಥಪಂಥ ಜೋಗಿ ಸಮಾಜ ಆಗ್ರಹ

ಉಡುಪಿ: ನಾಥ ಪರಂಪರೆಯ ಪರಮೋಚ್ಚ ಗುರು ಹಾಗೂ ಗೋರಖ್‌ಪುರ ಮಠಾಧೀಶ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಬಗ್ಗೆ ಕಾಂಗ್ರೆಸ್ ನಾಯಕ ಮಿಥುನ್ ರೈ ಅವಹೇಳನಕಾರಿಯಾಗಿ ಮಾತನಾಡಿ, ವಾಕ್ ಸ್ವಾತಂತ್ರ್ಯ ದುರುಪಯೋಗ ಪಡಿಸಿಕೊಂಡಿದ್ದು ಅವರು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಅಖಿಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಸೇವಾ ಸಮಿತಿ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಂಘಟನಾ ಕಾರ್ಯದರ್ಶಿ ರಮಾನಾಥ ಜೋಗಿ ಭಟ್ಕಳ, ಸುಮಾರು ಒಂದು ಸಾವಿರ ವರ್ಷ ಇತಿಹಾಸ ಇರುವ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಸ್ವಾಮಿ ಮೂರ್ತಿ ಗೋರಕ್ಷನಾಥ ಮಠದ ಮತ್ಸ್ಯೇಂದ್ರನಾಥರ ತಪಸ್ಸಿನಿಂದ ಉದ್ಭವಿಸಿದೆ ಎಂಬುದು ಚರಿತ್ರೆಯಲ್ಲಿ ದಾಖಲಾಗಿದೆ. ಕದ್ರಿ ಯೋಗೀಶ್ವರ ಮಠ ಅತ್ಯಂತ ಪ್ರಮುಖ ನಾಥಪಂಥದ ಕೇಂದ್ರವಾಗಿದೆ. ಇದನ್ನು ಒಳಗೊಂಡಂತೆ ಹಲವರಿ ಮಠ ಯಡಮೊಗೆ, ಸಾಗರ ಚಂದ್ರಗುತ್ತಿ ಮಠ ಸಹಿತ ಅನೇಕ ಮಠಗಳ ಪೀಠಾಧಿಪತಿಗಳನ್ನು ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಆದರೆ ತೊಕ್ಕೊಟ್ಟು ಬಸ್ಸು ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ನಾಯಕ ಮಿಥುನ್ ರೈ ಅವಹೇಳನಕಾರಿಯಾಗಿ ಯೋಗಿ ಆದಿತ್ಯನಾಥ್ ಅವರನ್ನು ನಿಂದಿಸಿದ್ದಾರೆ. ಆದ್ದರಿಂದ ಅವರು ಬಹಿರಂಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ರಾಜ್ಯಾಧ್ಯಕ್ಷ ಶಿವರಾಮ ಜೋಗಿ, ಜಿಲ್ಲಾಧ್ಯಕ್ಷ ದಿನೇಶ್ ಜೋಗಿ, ಸದಸ್ಯರಾದ ಸತ್ಯನಾರಾಯಣ ಜೋಗಿ, ಸುರೇಶ್ ಜೋಗಿ, ಅಶೋಕ್ ಜೋಗಿ, ರವೀಂದ್ರ ಜೋಗಿ, ಉದಯಕುಮಾರ್ ಜೋಗಿ, ಹರೀಶ್ ಜೋಗಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss