Tuesday, June 28, 2022

Latest Posts

ಯೋಗಿ ನಿರ್ವಹಣೆಯಿಂದ 85 ಸಾವಿರ ಜನರ ಜೀವ ಉಳಿದಿದೆ: ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ

ಲಕ್ನೋ:ಕೋವಿಡ್-೧೯ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರಕಾರ ಕೈಗೊಂಡ ವಿಸ್ತೃತ ಸಿದ್ಧತೆಗಳಿಂದಾಗಿ ಕನಿಷ್ಠ ೮೫ ಸಾವಿರ ಜೀವಗಳನ್ನು ಉಳಿಸಲು ಸಾಧ್ಯವಾಗಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶದಲ್ಲಿ ೨೦೧೭ರ ಮೊದಲು ಇಂತಹ ಒಂದು ಸಿದ್ಧತೆಗಳ ಬಗ್ಗೆ ಕಲ್ಪಿಸಲೂ ಸಾಧ್ಯವಿಲ್ಲದ ಪರಿಸ್ಥಿತಿ ಇತ್ತು ಎಂಬುದಾಗಿಯೂ ಅವರು ಬೊಟ್ಟು ಮಾಡಿದ್ದಾರೆ .
ಉತ್ತರಪ್ರದೇಶದಲ್ಲಿ ಕೈಗಾರಿಕಾ ಸಂಘಗಳೊಂದಿಗೆ ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸುವ “ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜ್ಗಾರ್ ಅಭಿಯಾನ್”ನನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿಯವರು, ಈ ಒಂದು ಸಾಂಕ್ರಾಮಿಕ ಒಡ್ಡಿದ ಸವಾಲನ್ನೇ ಯೋಗಿ ಆದಿತ್ಯನಾಥ್ ಅವರು ಅವಕಾಶವನ್ನಾಗಿ ಪರಿವರ್ತಿಸಿರುವುದು ಶ್ಲಾಘನೀಯ .
ಯೋಗಿ ಸರಕಾರ ಕೊರೋನಾ ಪಿಡುಗು ಒಡ್ಡಿದ ಸವಾಲಿನ ವಿರುದ್ಧ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ.ಇದಕ್ಕೆ ಯೋಗಿ ಸರಕಾರಬರುವವರೆಗೂ ಹಿಂದೆಲ್ಲ ನಡೆದ ಪ್ರಯಾಗ ಕುಂಭ ಮೇಳಗಳಲ್ಲಿ ಕಾಲ್ತುಳಿತ ,ಸಾವು-ನೋವು ಸಾಮಾನ್ಯವೆನಿಸಿತ್ತು. ಸಾವಿರಾರು ಮಂದಿ ಯಾತ್ರಿಕರು ಸಾವಿಗೀಡಾಗುವಂತಹ ದುರಂತಗಳನ್ನು ಕಾಣಬೇಕಾಗಿಬರುತ್ತಿತ್ತು. ಆದರೆ ಯೋಗಿ ಆದಿತ್ಯನಾಥ್ ಸರಕಾರ ಬಂದ ಬಳಿಕ ನಡೆದ ಕುಂಭಮೇಳ ಸುವ್ಯವಸ್ಥೆ, ಸ್ವಚ್ಛತೆಯ ಮೂಲಕ ಸರ್ವತ್ರ ಶ್ಲಾಘನೆಗೆ ಒಳಗಾಗಿತ್ತು ಎಂಬ ಬಗ್ಗೆ ಮೋದಿ ಸ್ಮರಿಸಿಕೊಂಡರು.
ಉತ್ತರ ಪ್ರದೇಶದ ಜನಸಂಖ್ಯೆ ೨೪ಕೋಟಿ. ಇದು ಇಂಗ್ಲೆಂಡ್, ಇಟೆಲಿ, ಫ್ರಾನ್ಸ್, ಸ್ಪೈನ್ ಸೇರಿದಂತೆ ನಾಲ್ಕು ಯುರೋಪ್ ದೇಶಗಳ ಜನಸಂಖ್ಯೆಗೆ ಸಮವಾಗಿದೆ.ಆದರೆ ಆ ದೇಶಗಳಲ್ಲಿ ಕೋವಿಡ್-೧೯ಕ್ಕೆ ಬಲಿಯಾದವರ ಸಂಖ್ಯೆ ೧.೩೦ಲಕ್ಷ !ಈ ದೇಶಗಳು ಆರೋಗ್ಯ ಮೂಲಸೌಕರ್ಯ ಸೇರಿದಂತೆ ಅತ್ಯಂತ ಸಂಪನ್ನ ದೇಶಗಳಾಗಿದ್ದೂ, ಈ ಸ್ಥಿತಿ ಬಂದಿದೆ. ಇಷ್ಟೇ ಜನಸಂಖ್ಯೆ ಹೊಂದಿರುವ ಅಮೆರಿಕದಲ್ಲಿ ೧.೨೫ಲಕ್ಷ ಜನರು ಬಲಿಯಾಗಿದ್ದಾರೆ.ನೋಡಿದರೆ ಉತ್ತರಪ್ರದೇಶದಲ್ಲಿ ಕೊರೋನಾ ಸಾಂಕ್ರಾಮಿಕದಿಂದ ಬಲಿಯಾದವರ ಸಂಖ್ಯೆ ಮಾತ್ರ ೬೦೦ಎಂಬುದರತ್ತ ಅವರ ಗಮನ ಸೆಳೆದರು. ಉತ್ತರಪ್ರದೇಶ ಸರಕಾರ ಕೈಗೊಂಡ ಕ್ರಮದಿಂದ ಕನಿಷ್ಠ ೮೫ಸಾವಿರ ಜನರ ಜೀವ ಉಳಿದಿದೆ ಎಂದರು ಮೋದಿ.
ಉತ್ತರಪ್ರದೇಶಕ್ಕೆ ೩೦ರಿಂದ ೩೫ಲಕ್ಷ ವಲಸೆ ಕಾರ್ಮಿಕರು ನೂರಾರು ಶ್ರಮಿಕ್ ರೈಲುಗಳ ಮೂಲಕ ವಾಪಸಾಗಿದ್ದಾರೆ. ಇವರನ್ನೆಲ್ಲ ಈಗ ಸ್ಥಳೀಯವಾಗಿಯೇ ಕೆಲಸದಲ್ಲಿ ತೊಡಗಿಸಲಾಗುತ್ತಿದೆ. ಆರು ಜಿಲ್ಲೆಗಳ ಹಳ್ಳಿಗಳ ಜೊತೆ ಸಾಮಾನ್ಯ ಸೇವೆಗಳ ಕೇಂದ್ರಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಪ್ರಧಾನಿಯವರ ಸಂವಹನ ನಡೆಸಿದ್ದು, ಯೋಗಿಯವರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆಂದರೆ ತಮ್ಮ ಪಿತಾಶ್ರೀಯವರು ನಿಧನರಾದಾಗಲೂ ಅಂತ್ಯವಿಗೂ ಹೋಗದೆ ಜನಸೇವೆಯಲ್ಲಿ ನಿರತರಾಗಿದ್ದು ಅವರ ಸಮರ್ಪಣಾ ಭಾವಕ್ಕೆ ಸಾಕ್ಷಿ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss