Sunday, July 3, 2022

Latest Posts

ಯೋಗೀಶಗೌಡ ಹತ್ಯೆ ಪ್ರಕರಣ: ತನಿಖಾಧಿಕಾರಿಗೆ ಷರತ್ತುಬದ್ಧ ಜಾಮೀನು ಮಂಜೂರು

ಹೊಸ ದಿಗಂತ ವರದಿ, ಧಾರವಾಡ:

ಜಿಪಂ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಇನ್ಸಪೆಕ್ಟರ್ ಚನ್ನಕೇಶವ ಟಿಂಗರಿಕರ್‌ಗೆ ಧಾರವಾಡ ಹೈಕೋರ್ಟ್ ಪೀಠ ಸೋಮವಾರ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಯೋಗೇಶಗೌಡ ಗೌಡರ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಇನ್ಸಪೆಕ್ಟರ್ ಚನ್ನಕೇಶವ ಟಿಂಗರಿಕರ್ ಪ್ರಕರಣದ ಸಾಕ್ಷಿ ನಾಶದ ಆರೋಪವಿತ್ತು. ಅಲ್ಲದೇ, ಸಿಬಿಐ ಅಧಿಕಾರಿಗಳಿಂದ ಬಂಧನದ ಭೀತಿಯಲ್ಲಿದ್ದರಿಂದ ನಿರೀಕ್ಷಾ ಜಾಮೀನು ಕೋರಿದ್ದರು.
ಈ ಹಿಂದೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಚನ್ನಕೇಶವ ಟಿಂಗರಿಕರ್ ಜಾಮೀನು ಅರ್ಜಿ ವಜಾಗೊಂಡಿತ್ತು. ನಂತರ ಇನ್ಸಕೆಪ್ಟರ್ ಚನ್ನಕೇಶ, ನ.9ರಂದು ಜಾಮೀನು ನೀಡುವಂತೆ ಕೋರಿ ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದರು.
ನ.11ರಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ ನ.14ಕ್ಕೆ ಮುಂದೂಡಿತ್ತು. ನ.14ರಂದು ಹೈಕೋರ್ಟ್ಗೆ ಸಿಬಿಐ ತಕರಾರು ಅರ್ಜಿ ಸಲ್ಲಿಸಲು ಕಾಲಾವಕಾಶ ಕೇಳಿದ ಹಿನ್ನಲೆ ತನಿಖಾಧಿಕಾರಿ ಅರ್ಜಿ ವಿಚಾರಣೆ ನ.23ಕ್ಕೆ ಮುಂದೂಡಿತ್ತು.
ನ.23ರoದು ಅರ್ಜಿ ವಿಚಾರಣೆ ಕೈಗೊತ್ತಿಕೊಂಡ ಹೈಕೋರ್ಟ್ ಮುಂದೆ, ಕೊಲೆ ಪ್ರಕರಣದ ಬಗ್ಗೆ ತನಿಖಾಧಿಕಾರಿ ವಿಚಾರಣೆ ಅಗತ್ಯದ ಹಿನ್ನಲೆ ಜಾಮೀನು ನೀಡಿದಂತೆ ಸಿಬಿಐ ಪರ ವಕೀಲರು ತಕರಾರು ಅರ್ಜಿ ಸಲ್ಲಿಸಿದ್ದರಿಂದ ವಿಚಾರಣೆ ಕಾಯ್ದಿರಿಸಿ ನ.30ಕ್ಕೆ ಮೂಂದಿಡಿತು.
ಸೋಮವಾರ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್, ಉಭಯ ವಕೀಲರ ವಾದ ಆಲಿಸಿ ನ್ಯಾಯಾಂಗ ವ್ಯಾಪ್ತಿ ಬಿಡದಂತೆ, ಸಿಬಿಐ ತನಿಖೆಗೆ ಸಹಕಾರಿಸುವ ಷರತ್ತುಗಳನ್ನು ವಿಧಿಸಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss