Wednesday, June 29, 2022

Latest Posts

ಯೋಗೇಶಗೌಡ ಕೊಲೆ ಪ್ರಕರಣ: ವಿನಯ್ ಜಾಮೀನು ಅರ್ಜಿ ಹಿಂಪಡೆದ ವಕೀಲರು

ಹೊಸದಿಗಂತ ವರದಿ,ಧಾರವಾಡ:

ಜಿಪಂ ಸದಸ್ಯ ಯೋಗೇಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿಗೆ ನಿರೀಕ್ಷಣಾ ಜಾಮೀನು ಕೋರಿ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿ ಗುರುವಾರ ಹಿಂದಕ್ಕೆ ಪಡೆದಿದ್ದಾರೆ.

ವಿನಯ ಪರ ವಕೀಲ ಭರತಕುಮಾರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಬುಧವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಸಿಬಿಐ ಅಧಿಕಾರಿಗಳು ತಕರಾರು ಅರ್ಜಿ ಸಲ್ಲಿಸದ ಹಿನ್ನಲೆ ವಿಚಾರಣೆ ನ.19ಕ್ಕೆ ಮುಂದೂಡಿತು.

ಗುರುವಾರ ನ್ಯಾಯಾಲಯಕ್ಕೆ ಸಿಬಿಐ ಅಧಿಕಾರಿಗಳು ಜಾಮೀನು ಅರ್ಜಿಗೆ ತಕರಾರು ಸಲ್ಲಿಸಲು ಆಗಮಿಸಿದ್ದರು. ಆದರೆ, ಆರೋಪಿ ವಿನಯ ಕುಲಕರ್ಣಿ ಕುಟುಂಬಸ್ಥರ ಕೋರಿಕೆ ಮೇರೆಗೆ ವಕೀಲ ಎಂ.ಎ.ಪಠಾಣ ಜಾಮೀನು ಅರ್ಜಿ ವಾಪಸ್ ಪಡೆದರು.

ಹೀಗಾಗಿ ಸಿಬಿಐ ಅಧಿಕಾರಿಗಳು ತಕರಾರು ಸಲ್ಲಿಸಲಿಲ್ಲ. ಎರಡು ದಿನಗಳಲ್ಲಿ ವಿನಯ ಕುಲಕರ್ಣಿ ಪರ ಜಾಮೀನು ಕೋರಿ ಪುನಃ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದು, ಆವಾಗ ಸಿಬಿಐ ಅಧಿಕಾರಿಗಳು ಜಾಮೀನಿಗೆ ತಕರಾರು ಸಲ್ಲಿಸುವ ಸಾಧ್ಯತೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss