Wednesday, August 10, 2022

Latest Posts

ಯೋಗೇಶಗೌಡ ಗೌಡರ ಕೊಲೆ ಪ್ರಕರಣ, ಮುಂದುವರೆದ ಸಿಬಿಐ ತನಿಖೆ: ಹಲವರ ವಿಚಾರಣೆ

ಧಾರವಾಡ: ಹಲವು ದಿನಗಳಿಂದ ಧಾರವಾಡದಲ್ಲಿ ಠಿಕಾಣಿ ಹೂಡಿರುವ ಸಿಬಿಐ ಅಧಿಕಾರಿಗಳ ತಂಡ ಜಿಲ್ಲಾ ಪಂಚಾಯಿತಿ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ ಕೊಲೆ ಪ್ರಕರಣದ ತನಿಖೆ ಚುರುಗೊಳಿಸಿದ್ದು, ಮಂಗಳವಾರವೂ ಹಲವರನ್ನು ವಿಚಾರಣೆ ನಡೆಸಿದೆ.
ಮೊದಲು ಧಾರವಾಡದ ಉಪನಗರ ಠಾಣೆಯ ಮೇಲ್ಮಹಡಿ ಕಟ್ಟಡದಲ್ಲಿ ವಿಚಾರಣೆ ನಡೆಸಿತ್ತಿದ್ದ ಸಿಬಿಐ ತಂಡ ಏಕಾಏಕಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಸಭಾಂಗಣಕ್ಕೆ ವಿಚಾರಣಾ ಕಚೇರಿ ಬದಲಾಯಿಸಿರುವುದು ಸಾಕಷ್ಟು ತೀವ್ರ ಕುತೂಹಲ ಮೂಡಿಸಿದೆ.
ಕೆಲ ದಿನದಿಂದ ಸಿಬಿಐ ವಿಚಾರಣೆ ಎದುರಿಸುವ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಸೋಮವಾರ ಪುನಃ ಸಿಬಿಐ ಬುಲಾವ್ ನೀಡಿ ಐದನೇ ಭಾರಿಗೆ ವಿಚಾರಣೆಗೆ ಒಳಪಡಿಸಿದೆ. ಧಾರವಾಡದಲ್ಲಿ ಬೀಡುಬಿಟ್ಟು ಅಧಿಕಾರಿಗಳು ಅಗತ್ಯ ದಾಖಲೆ ಹಾಗೂ ಸಾಕ್ಷ್ಯ ಕಲೆ ಹಾಕಿದ್ದಾರೆ.
ಹಿಂದಿನ ಶಹರ ಠಾಣೆ ಇನ್ಸಪೆಕ್ಟರ್ ಸದ್ಯ ಡಿವೈಎಸ್ಪಿ ಶಿವಾನಂದ ಚಲವಾದಿ, ಹೆಡ್ ಕಾನ್ಸಟೇಬಲ್ ಶಂಕರಗೌಡ ಪಾಟೀಲ, ಇಲ್ಲಿನ ತಹಶೀಲ್ದಾರ್ ಕಚೇರಿ ಗ್ರಾಮಲೆಕ್ಕಿಗ ವಿರೇಶ ಬ್ಯಾಹಟ್ಟಿ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿ ಮಹತ್ವದ ಸಾಕ್ಷö್ಯಗಳನ್ನು ಸಂಗ್ರಹಿಸಿದ್ದಾರೆ.
ಯೋಗೇಶಗೌಡರ ಕೊಲೆ ಜಮೀನು ವಿವಾದಕ್ಕೆ ನಡೆದಿದೆಂಬ ಹೇಳಿಕೆ ಅಡಿಯಲ್ಲಿ ಸಿಬಿಐ ಮಂಗಳವಾರವೂ ಈ ನಿಟ್ಟಿನಲ್ಲಿ ತನಿಖೆ ಕೈಗೊಂಡಿದೆ. ಹಲವರನ್ನು ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು ಪ್ರಕರಣಕ್ಕೆ ಸಂಬoಧಿಸಿದoತೆ ಪೂರಕ ಮಾಹಿತಿ ಕಲೆ ಹಾಕಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss