Tuesday, June 28, 2022

Latest Posts

ಯೋಗೇಶ್ ಗೌಡ ಕೊಲೆ| ತನಿಖಾಧಿಕಾರಿ ಜಾಮಿನು ಅರ್ಜಿ ಮುಂದೂಡಿಕೆ

ಹೊಸದಿಗಂತ ವರದಿ, ಧಾರವಾಡ

ಜಿಪಂ ಬಿಜೆಪಿ ಸದಸ್ಯ ಯೋಗೇಶ್ ಗೌಡ ಗೌಡರ ಕೊಲೆ ಪ್ರಕರಣದ ತನಿಖಾಧಿಕಾರಿ ಇನ್ಸಪೆಕ್ಟರ್ ಚನ್ನಕೇಶವ ಟಿಂಗರಿಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಧಾರವಾಡ ಹೈಕೋರ್ಟ್ ಪೀಠ ನ.30ಕ್ಕೆ ಮುಂದೂಡಿ ಸೋಮವಾರ ಆದೇಶ ಹೊರಡಿಸಿದೆ.

ಈ ಹಿಂದೆ ನ.18ರಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠದ ಮುಂದೆ ಸಿಬಿಐ ಅಧಿಕಾರಿಗಳು ತಕರಾರು ಅಜಿ ಸಲ್ಲಿಸಲು ಕಾಲಾವಕಾಶ ಕೇಳಿದ ಹಿನ್ನಲೆ ತನಿಖಾಧಿಕಾರಿ ಜಾಮೀನು ಅರ್ಜಿ ವಿಚಾರಣೆಯನ್ನು ನ.23ಕ್ಕೆ ಮುಂದೂಡಿತ್ತು.

ಸೋಮವಾರ ಜಾಮೀನು ಅರ್ಜಿ ವಿಚಾರಣೆ ಕೈಗೊತ್ತಿಕೊಂಡ ಹೈಕೋರ್ಟ್ ಪೀಠದ ಮುಂದೆ, ಕೊಲೆ ಪ್ರಕರಣದ ಕುರಿತು ತನಿಖಾಧಿಕಾರಿ ವಿಚಾರಣೆ ಅಗತ್ಯವಿರುವ ಹಿನ್ನಲೆ ಜಾಮೀನು ನೀಡಿದಂತೆ ಸಿಬಿಐ ಪರ ವಕೀಲರು ಪೀಠಕ್ಕೆ ತಕರಾರು ಅರ್ಜಿ ಸಲ್ಲಿಸಿದರು.

ಈ ಹಿಂದೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಟಿಂಗರಿಕರ್ ಜಾಮೀನು ಅರ್ಜಿ ವಜಾಗೊಂಡಿತ್ತು. ನಂತರ ಇನ್ಸಕೆಪ್ಟರ್ ಚನ್ನಕೇಶ, ಜಾಮೀನು ಕೋರಿ ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದರು. ನ.11ರಂದು ವಿಚಾರಣೆ ನಡೆಸಿದ ಹೈಕೋರ್ಟ್ ನ.14ಕ್ಕೆ ಮುಂದೂಡಿತ್ತು. ಇಂದು ವಿಚಾರಣೆ ನಡೆಸಿದ ಪೀಠವು ಅರ್ಜಿ ವಿಚಾರಣೆ ನ.30ಕ್ಕೆ ಮುಂದೂಡಿ ಆದೇಶ ಹೊರಸಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss