Saturday, August 13, 2022

Latest Posts

ಯೋಗೇಶ ಕೊಲೆ: ಮುಂದುವರೆದ ಸಿಬಿಐ ತನಿಖೆ, ನಿವೃತ್ತ ಅಧಿಕಾರಿ ಮಗ-ವಕೀಲನ ವಿಚಾರಣೆ

ಧಾರವಾಡ: ಧಾರವಾಡದಲ್ಲಿ ಠಿಕಾಣಿ ಹೂಡಿದ ಸಿಬಿಐ ಅಧಿಕಾರಿಗಳ ತಂಡ ಜಿ.ಪಂ. ಬಿಜೆಪಿ ಸದಸ್ಯ ಯೋಗೇಶಗೌಡ
ಗೌಡರ ಕೊಲೆ ಪ್ರಕರಣದ ತನಿಖೆ ಮುಂದುವರೆಸಿದ್ದು, ಶುಕ್ರವಾರವೂ ಕೆಲವರನ್ನು ಉಪನಗರ ಠಾಣೆಗೆ ಕರೆಯಿಸಿಕೊಂಡ ಹಲವು ಆಯಾಮದಲ್ಲಿ ವಿಚಾರಣೆ ನಡೆಸಿದೆ.
ಕೊಲೆ ಪ್ರಕರಣ ಕುರಿತಂತೆ ಶುಕ್ರವಾರ ಕೂಡ ಯೋಗೇಶ ಪತ್ನಿ ಮಲ್ಲಮ್ಮ ಗೌಡರ ಹಾಗೂ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರಗೆ ಬಿಲಾವ್ ನೀಡಿ, ಬೆಳಿಗ್ಗೆಯಿಂದ ಸಂಜೆವರೆಗೂ ವಿಚಾರಣೆ ನಡೆಸುವ ಮೂಲಕ ಹಲವು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿರುವುದು ತಿಳಿದುಬಂದಿದೆ. ಆರೋಪಿಗಳ ಪರ ವಕೀಲ ಶಿಂಧೆ, ನಿವೃತ್ತ ಪೊಲೀಸ್ ಅಧಿಕಾರಿ ಮಗ ಜಾಫರ್ ತಡಕೋಡ, ಆರೋಪಿ ಬಸವರಾಜ ಮುತಗಿ, ಸೇರಿದಂತೆ ಹಲವರನ್ನು ಠಾಣೆಗೆ ಕರೆಯಿಸಿ ಅಧಿಕಾರಿಗಳ ತಂಡವೂ ನಿರಂತರ ಎರಡು ಗಂಟೆಗಳ ನಂತರ ವಿಚಾರಣೆ ಅಂತ್ಯಗೊಳಿಸಿದೆ.
ಶುಕ್ರವಾರ ಪುನಃ ಠಾಣೆಗೆ ಬಂದ ಯೋಗೇಶ ಪತ್ನಿ ಮಲ್ಲಮ್ಮ ಗೌಡರ ಹಾಗೂ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಇಡೀ ದಿನ ಡ್ರಿಲ್ ಎದುರಿಸಿದ್ದಾರೆ. ಬೆಳಿಗ್ಗೆ ೧೧ಕ್ಕೆ ಆರಂಭಿಸಿದ ಸಿಬಿಐ ವಿಚಾರಣೆ ಸಂಜೆವರೆಗೂ ನಡೆಸಿದ್ದು, ಸಂಜೆ ವೇಳೆಗೆ ವಿಚಾರಣೆ ಅಂತ್ಯಗೊಳಿಸಿದೆ ಎನ್ನಲಾಗಿದೆ.
ಇನ್ನಷ್ಟು ದಿನ ಸಿಬಿಐ ತಂಡ ಧಾರವಾಡದಲ್ಲಿ ಠಿಕಾಣಿ ಹೂಡುವ ಲಕ್ಷಣಗಳಿದ್ದು, ಸಾಕ್ಷö್ಯ ನಾಶ ಆರೋಪದ ಪ್ರತ್ಯೇಕ ಎಫ್‌ಐಆರ್ ದಾಖಲಿಸಲು ನ್ಯಾಯಾಲಯದ ಅನುಮತಿ ನೀರಿಕ್ಷೆಯಲ್ಲಿದೆ. ಪ್ರಕರಣ ಕುರಿತಂತೆ ಯಾರನೆಲ್ಲ ವಿಚಾರಣೆಗೆ ಒಳಪಡಿಸಲಿದ್ದಾರೆ ಎಂಬುದು ಕಾದುನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss