Monday, July 4, 2022

Latest Posts

ಯೋಗೇಶ ಗೌಡ ಕೊಲೆ ಪ್ರಕರಣ: ತನಿಖೆ ತೀವ್ರಗೊಳಿಸಿದ ಸಿಬಿಐ ಅಧಿಕಾರಿಗಳ ತಂಡ

ಹೊಸ ದಿಗಂತ ವರದಿ, ಧಾರವಾಡ:

ಜಿಪಂ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ ಕೊಲೆ ಪ್ರಕರಣದ ತನಿಖೆ ರಾಕೇಶ ರಂಜನ್ ನೇತೃತ್ವದ ಸಿಬಿಐ ಅಧಿಕಾರಿಗಳ ತಂಡ ತೀವ್ರಗೊಳಿಸಿದೆ.
ಸಿಬಿಐ ಅಧಿಕಾರಿಗಳ ವಿಚಾರಣೆ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸಿದೆ. ಶುಕ್ರವಾರ ಸಿಬಿಐ ಅಧಿಕಾರಿಗಳು ಪುನಃ ಕೆಲ ಆರೋಪಿಗಳನ್ನು ಉಪನಗರ ಠಾಣೆಗೆ ಕರೆಯಿಸಿ ವಿಚಾರಣೆಗೆ ಒಳಪಡಿಸಿದೆ.
ಆರೋಪಿ ಬಸವರಾಜ ಮುತ್ತಗಿ, ಹತ್ಯೆಗೆ ಬಳಸಿದ ಕಾರು ಮಾಲೀಕ ಚಂದ್ರು ಪೂಜಾರ್ ಅವರಿಗೆ ಸಿಬಿಐ ತಂಡ ಡ್ರಿಲ್ ಮಾಡಿಸಿದೆ. ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.
ಕೊಲೆ ನಡೆದ ವೇಳೆ ಕಪ್ಪು ಬಣ್ಣದ ಕಾರು ಬಳಕೆ ಪತ್ತೆಯಾಗಿತ್ತು. ಆ ಕಾರು ಚಂದ್ರು ಪೂಜಾರ್‌ಗೆ ಸೇರಿದ್ದರಿಂದ ಚಂದ್ರು ಪೂಜಾರನನ್ನು ಸಿಬಿಐ ವಿಚಾರಣೆ ನಡೆಸಿದೆ.
ಈಗಾಗಲೇ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಸಹೋದರ ವಿಜಯ ಕುಲಕರ್ಣಿ ಸೇರಿದಂತೆ ಕೆಲವರನ್ನು ಸಿಬಿಐ ವಿಚಾರಣೆ ನಡೆಸಿದೆ. ಸಿಬಿಐ ತನಿಖೆಯಿಂದ ಪ್ರಕರಣ ಯಾವ ತಿರುವು ಪಡೆಯಲಿದೆಂದು ಕಾದುನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss