ನವದೆಹಲಿ: ಕೋವಿಡ್-19ರ ನಿರ್ವಹಣೆಗಾಗಿ ಆಯುರ್ವೇದ ಮತ್ತು ಯೋಗ ಆಧಾರಿತ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ವೈದ್ಯಕೀಯ ನಿರ್ವಹಣಾ ಶಿಷ್ಟಾಚಾರವನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಇಂದು ಬಿಡುಗಡೆ ಮಾಡಿದರು. ಈ ಎಸ್ಓಪಿಯಲ್ಲಿ ಕರೋನಾ ವೈರಸ್ ಸೋಂಕು ತಡೆಗಟ್ಟಲು ಮತ್ತು ಸೌಮ್ಯ ಮತ್ತು ಅಸಂಪ್ರದಾರೋಗ ಪ್ರಕರಣಗಳ ಚಿಕಿತ್ಸೆಗಾಗಿ ಆಹಾರ ಕ್ರಮಗಳು, ಯೋಗ ಮತ್ತು ಆಯುರ್ವೇದ ಗಿಡಮೂಲಿಕೆಗಳು ಮತ್ತು ಸೂತ್ರಗಳನ್ನು ಪಟ್ಟಿ ಮಾಡಲಾಗಿದೆ.
ಆಯುಷ್ ಸಚಿವ ಶ್ರೀಪಾದ್ ನಾಯಕ್ ಉಪಸ್ಥಿತಿಯಲ್ಲಿ ವರ್ಧನ್ ಅವರು ‘ಆಯುರ್ವೇದ ಮತ್ತು ಯೋಗ ಫಾರ್ ಮ್ಯಾನೇಜ್ ಮೆಂಟ್ ಫಾರ್ ಕೋವಿಡ್ -19’ ಎಂಬ ರಾಷ್ಟ್ರೀಯ ವೈದ್ಯಕೀಯ ನಿರ್ವಹಣಾ ನಿಯಮಾವಳಿಯನ್ನು ಬಿಡುಗಡೆ ಮಾಡಿದರು.
ಬಿಡುಗಡೆಯ ಬಳಿಕ ಮಾತನಾಡಿದ ಅವರು, ‘ಈ ಶಿಷ್ಟಾಚಾರವು ಕೋವಿಡ್-19 ನ ನಿರ್ವಹಣೆಯಲ್ಲಿ ಮಾತ್ರವಲ್ಲದೆ, ಆಧುನಿಕ ಕಾಲದ ಸಮಸ್ಯೆಗಳನ್ನು ಪರಿಹರಿಸುವ ಸಾಂಪ್ರದಾಯಿಕ ಜ್ಞಾನವನ್ನ ಪ್ರಸ್ತುತಗೊಳಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ’ ಎಂದರು.
ಸ್ವಾತಂತ್ರ್ಯನಂತರ ಆಯುರ್ವೇದದ ಕಡೆ ಹೆಚ್ಚಿನ ಗಮನ ನೀಡಲಿಲ್ಲ ಆದ್ರೆ, ಆಧುನಿಕ ವೈದ್ಯಕೀಯ ತಳಹದಿಯಲ್ಲಿ ಆಯುರ್ವೇದ ಮಹತ್ವದ ಪ್ರಭಾವವನ್ನ ಬೀರಿದೆ ಎಂದು ಹೇಳಿದರು. ಇನ್ನು ಪ್ರಸ್ತುತ ತಿಳಿವಳಿಕೆಯು ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟಲು ಮತ್ತು ಹರಡುವಿಕೆಯಿಂದ ಸಂರಕ್ಷಿಸಿಕೊಳ್ಳಲು ಉತ್ತಮ ಪ್ರತಿರಕ್ಷಣಾ ವ್ಯವಸ್ಥೆಯು ಅತ್ಯಗತ್ಯ ಎಂಬುದನ್ನು ಸೂಚಿಸುತ್ತದೆ ಎಂದು ಆಯುಷ್ ಸಚಿವಾಲಯ ಪ್ರೋಟೋಕಾಲ್ ಡಾಕ್ಯುಮೆಂಟ್ ನಲ್ಲಿ ಉಲ್ಲೇಖಿಸಿದೆ.