Tuesday, June 28, 2022

Latest Posts

ಯೋಗ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕಾವ್ಯಶ್ರೀ ಗೆ ವಿಹಿಂಪ ಅಭಿನಂದನೆ

ಕಾಸರಗೋಡು: ಕೇರಳ ರಾಜ್ಯ ಮಟ್ಟದ ಯೋಗ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾದ ಕಾಸರಗೋಡು ಜಿಲ್ಲೆಯ ಹೆಮ್ಮೆಯ ತರುಣಿ ಕುಮಾರಿ ಕಾವ್ಯಶ್ರೀ ಜೋಡುಕಲ್ಲು ಇವರನ್ನು ವಿಶ್ವ ಹಿಂದು ಪರಿಷತ್, ಬಜರಂಗ ದಳ, ಮಾತೃಶಕ್ತಿ , ದುರ್ಗಾವಾಹಿನಿ ಇವುಗಳ ಮಂಗಳೂರು ಗ್ರಾಮಾಂತರ ಕಾಸರಗೋಡು ಜಿಲ್ಲಾ ಸಮಿತಿಗಳ ಪರವಾಗಿ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ವಿಹಿಂಪ ದಕ್ಷಿಣ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ, ಜಿಲ್ಲಾ ಉಪಾಧ್ಯಕ್ಷ ಮೀನಾರು ಬಾಲಕೃಷ್ಣ ಶೆಟ್ಟಿ , ಜಿಲ್ಲಾ ಸಹ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು , ಮಾತೃಶಕ್ತಿ ಜಿಲ್ಲಾ ಪ್ರಮುಖ್ ಮೀರಾ ಆಳ್ವ ಬೇಕೂರು, ದುರ್ಗಾವಾಹಿನಿ ಸಂಯೋಜಕಿ ಜಯಶ್ರೀ ಉದ್ಯಾವರ, ವಿಹಿಂಪ ಮಂಜೇಶ್ವರ ಪ್ರಖಂಡ ಅಧ್ಯಕ್ಷ ಸುರೇಶ್ ಶೆಟ್ಟಿ ಪರಂಕಿಲ, ಮಂಜೇಶ್ವರ ಖಂಡ ಸಮಿತಿ ದುರ್ಗಾವಾಹಿನಿ ಸಂಯೋಜಕಿ ಆಶಾ ತೂಮಿನಾಡು, ಮೀಯಪದವು ಖಂಡ ಸಮಿತಿ ದುರ್ಗಾವಾಹಿನಿ ಸಂಯೋಜಕಿ ಸೌಮ್ಯ ಪ್ರಕಾಶ್ ಮದಂಗಲ್ಲು ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss