ಕೆಲಸದ ಒತ್ತಡದಿಂದ ಬೆಳಗ್ಗೆ ವ್ಯಾಯಾಮ ಮಾಡೋದಕ್ಕೆ ಸಮಯ ಸಿಗೋದೆ ಇಲ್ಲ. ಇದು ಕೆಲವೊಮ್ಮೆ ದೇಹದಲ್ಲಿ ಅನಗತ್ಯ ಕೊಬ್ಬು ಶೇಕರಣೆಯಾಗಲು ಕಾರಣವಾಗುತ್ತದೆ. ಇನ್ನು ಮುಂದೆ ಈ ಚಿಂತೆ ಬೇಡ. ನೀವು ಮಲಗಿದ ಹಾಸಿಗೆಯ ಮೇಲೆಯೇ ಈ ವ್ಯಾಯಾಮಗಳನ್ನು ಮಾಡಿ ನಿಮ್ಮ ತೂಕ ಇಳಿಸಬಹುದು. ಹೇಗೆ ಅನ್ನುತ್ತೀರಾ? ಇಲ್ಲಿದೆ ಕೆಲವು ಟಿಪ್ಸ್..
ನೌಕಾಸನ: ಹಾಸಿಗೆ ಮೇಲೆ ನೇರವಾಗಿ ಮಲಗಿಕೊಳ್ಳಿ. ನಂತರ ನಿಧಾನವಾಗಿ ನಿಮ್ಮ ಎರಡೂ ಕಾಲುಗಳನ್ನು ನೆಲದಿಂದ ಮೇಲಕ್ಕೆ ಎತ್ತಬೇಕು. ಹಾಗೆ ನಿಧಾನವಾಗಿ ನಿಮ್ಮ ಕೈಗಳು ಹಾಗೂ ದೇಹದ ಮೇಲ್ಭಾಗವನ್ನು ಕೂಡ ಮೇಲಕ್ಕೆ ಎತ್ತಿ. ನಂತರ ವಾಪಾಸ್ ಆಗಿ.
ಮತ್ಸ್ಯಾಸನ: ಹಾಸಿಗೆಯ ಮೇಲೆ ನೇರವಾಗಿ ಮಲಗಿ ನಿಮ್ಮ ಕೈಗಳನ್ನು ಸೊಂಟದ ಕೆಳಗೆ ಚಾಚಿ ಬಿಗಿಯಾಗಿ ಇಟ್ಟುಕೊಳ್ಳಿ(ಇಲ್ಲವಾದರೆ ಅದನ್ನು ನಿಮ್ಮ ಸೊಂಟದ ಕೆಳಗೆ ಇಡಬಹುದು). ನಂತರ ಮೊಣಕೈ ಮೇಲೆ ದೇಹದ ತೂಕ ಇರಿಸಿ ನಿಮ್ಮ ತಲೆಯನ್ನು ನೆಲದಿಂದ ಮೇಲೆ ಬರಬಾರದು. ಕೇವಲ ನಿಮ್ಮ ಎದೆ ಭಾಗವನ್ನು ಮಾತ್ರ ಮೇಲಕ್ಕೆ ಎತ್ತ ಬೇಕು.
ಭುಜಂಗಾಸನ: ಹೊಟ್ಟೆ ತಾಗುವಂತೆ ಮಲಗಿಕೊಳ್ಳಿ ನಂತರ ನಿಮ್ಮ ಕೂಗಳನ್ನು ಭುಜದ ಬಳಿ ನೇರವಾಗಿ ಇಟ್ಟುಕೊಳ್ಳಿ. ಬಳಿಕ ನಿಮ್ಮ ಸೊಂಟದ ಮೇಲ್ಭಾಗವನ್ನು ಮಾತ್ರ ಹಿಂದಕ್ಕೆ ಭಾಗಿಸಿಕೊಂಡು ನಿಮ್ಮ ತಲೆಯನ್ನು ಮೇಲಕ್ಕೆತ್ತಿ ಕಣ್ಣುಗಳು ಮೇಲೆ ನೋಡುವಂತೆ ಮಾಡಿಕೊಳ್ಳಿ
ಧನುರಾಸನ: ನಿಮ್ಮ ಹೊಟ್ಟೆ ತಾಗುವಂತೆ ಮಲಗಿಕೊಳ್ಳೊ ಬಳಿಕ ನಿಮ್ಮ ಎರಡೂ ಕಾಲುಗಳನ್ನು ಮಂಡಿಗಳ ಬಳಿ ಬರುವಂತೆ ಮಾಡಿಕೊಳ್ಳಿ. ನಂತರ ಅದನ್ನ ನಿಮ್ಮ ಕೈ ಗಳಿಂದ ಹಿಡಿದುಕೊಳ್ಳಿ. ಹೀಗೆ ಕೆಲವು ಹೊತ್ತು ಇದೇ ಭಂಗಿಯಲ್ಲಿ ಇರಿ. ನಂತರ ವಾಪಾಸ್ ಆಗಿ.
ಉಷ್ಟ್ರಾಸನ: ಮೊದಲಿಗೆ ನಿಮ್ಮ ಮಂಡಿಯ ಮೇಲೆ ಕುಳಿತುಕೊಂಡು. ಮೊಣಕಾಲಿನ ಮೇಲೆ ಭಾಗುತ್ತಾ ನಿಮ್ಮ ಕೈಗಳನ್ನು ಹಿಂದಕ್ಕೆ ಚಾಚಿಕೊಳ್ಳಿ. ನಿಮ್ಮ ಕೈಗಳಿಂದ ನಿಮ್ಮ ಪಾದಗಳನ್ನು ಸ್ಪರ್ಶಿಸುವ ಪ್ರಯತ್ನಮಾಡಿ.