Friday, August 19, 2022

Latest Posts

ಹಾವೇರಿ ಜಿಲ್ಲೆಯಲ್ಲಿ 150 ಜನರಲ್ಲಿ ಕೊರೋನಾ ಸೋಂಕು ದೃಢ

ಹಾವೇರಿ: ಓರ್ವ ಯೋಧ, ನಾಲ್ವರು ಪೊಲೀಸ್, ಆರೋಗ್ಯ ಇಲಾಖೆಯ ಮೂವರು, ಇಬ್ಬರು ಶಿಕ್ಷಣ ಇಲಾಖೆಯ, ಡಿ ದರ್ಜೆ ನೌಕರ, ನ್ಯಾಯಾಂಗ ಇಲಾಖೆ ಮತ್ತು ಕೆಇಬಿ ಸಿಬ್ಬಂಧಿ ಸೇರಿ ಒಟ್ಟು ೧೫೦ ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆಯಲ್ಲದೆ ನಾಲ್ವರು ಮರಣಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.
ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ೧೩, ಹಾನಗಲ್ ೯, ಹಾವೇರಿ ೬, ಹಿರೇಕೆರೂರ ೧೪, ರಾಣೇಬೆನ್ನೂರ ೨೨, ಸವಣೂರ ೨ ಹಾಗೂ ಶೀಗ್ಗಾಂವ್ ತಾಲೂಕಿನಲ್ಲಿ ೨೪ ಕೊರೋನಾ ಸೋಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದ ೬೦ ವರ್ಷದ ಪುರುಷ, ಹಾವೇರಿ ತಾಲೂಕಿನ ಸಂಗೂರ ಗ್ರಮದ ೬೫ ವರ್ಷದ ಮಹಿಳೆ, ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಗ್ರಾಮದ ೬೦ ಮಹಿಳೆ ಹಾಗೂ ಬ್ಯಾಡಗಿ ಮೋಟೆಬೆನ್ನೂರ ಗ್ರಾಮದ ೫೮ ವರ್ಷದ ಪುರುಷ ನಿಧನರಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ೩೩೯೯ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದಿನ ೨೩ ಜನರು ಸೇರಿ ಇಂದಿವರೆಗೆ ೧೯೫೬ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ, ಇಂದಿನ ನಾಲ್ಕು ಮರಣ ಪ್ರಕರಣಗಳು ಸೇರಿ ಒಟ್ಟು ೭೪ ಜನರು ಮರಣವನ್ನು ಹೊಂದಿದ್ದಾರೆ. ಹೋಂ ಐಸೊಲೇಷನ್‌ದಲ್ಲಿರುವ ೬೭೮, ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ದಾಖಲಾಗಿರುವ ೬೯೧ ಜನರು ಸೇರಿ ಒಟ್ಟು ೧೩೬೯ ಜನರಲ್ಲಿ ಕೊರೋನಾ ಸೋಂಕು ಸಕ್ರೀಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!