Sunday, August 14, 2022

Latest Posts

ರಂಗೇರಿದೆ ಕೇರಳ ಸ್ಥಳೀಯಾಡಳಿತ ಚುನಾವಣೆ: ಈ ಬಾರಿ 20 ಲಕ್ಷ ಹೆಚ್ಚು ಮತದಾರರು

ಹೊಸ ದಿಗಂತ ವರದಿ, ಕಾಸರಗೋಡು:

ರಾಜ್ಯದಲ್ಲಿ ಈ ಬಾರಿಯ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಾಗಿ ಇದುವರೆಗೆ ಒಟ್ಟು 2,71,20,823 ಮಂದಿ ಮತದಾರರಿದ್ದಾರೆ. 2015ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 2.51 ಕೋಟಿ ಮಂದಿ ಮತದಾರರಿದ್ದರು. ಈ ಬಾರಿ ಇಲ್ಲಿಯತನಕ 20 ಲಕ್ಷ ಮತದಾರರು ಹೆಚ್ಚಿದ್ದಾರೆ. ಈ ಬಾರಿಯೂ ಬಹುಪಾಲು ಮತದಾರರು ಮಹಿಳೆಯರಾಗಿದ್ದಾರೆ. 1,41,94,775 ಮಂದಿ ಮಹಿಳೆಯರು ಮತ್ತು 1,29,25,766 ಪುರುಷರು ಒಳಗೊಂಡಿದ್ದಾರೆ. ಅಲ್ಲದೆ 282 ಮಂದಿ ಮಂಗಳಮುಖಿಯರು ಸೇರಿದ್ದಾರೆ.
ಸಪ್ಲಿಮೆಂಟರಿ ಮತದಾರರ ಪಟ್ಟಿಯನ್ನು ನವೆಂಬರ್ 10 ರಂದು ಪ್ರಕಟಿಸಲಾಗುವುದು. ಅಕ್ಟೋಬರ್ 31ರ ವರೆಗೆ ಲಭಿಸಿದ ಅರ್ಜಿಗಳನ್ನು ಪರಿಶೀಲಿಸಿದಾಗ 2,71,20,823 ಮಂದಿ ಮತದಾರರಿದ್ದಾರೆ. ಅಕ್ಟೋಬರ್10 ರಂದು ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯಲ್ಲಿ ಒಳಪಡದವರಿಗೆ ಹೆಸರು ಸೇರಿಸಲು ಅಕ್ಟೋಬರ್ 27 ರಿಂದ 31ರ ವರೆಗೆ ಅವಕಾಶ ಒದಗಿಸಲಾಗಿತ್ತು.
ಈ ಬಾರಿಯ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಕೇರಳದಲ್ಲಿ 34,744 ಮತಗಟ್ಟೆಗಳನ್ನು ಸಿದ್ಧಪಡಿಸಲಾಗುವುದು. ಕಳೆದ ಚುನಾವಣೆ ಸಂದರ್ಭದಲ್ಲಿ 34,423 ಮತಗಟ್ಟೆಗಳಿದ್ದವು.
ಈ ಬಾರಿ 321 ಮತಗಟ್ಟೆಗಳನ್ನು ಹೆಚ್ಚಿಸಲಾಗಿದೆ. 941 ಗ್ರಾಮ ಪಂಚಾಯತ್ ಗಳಲ್ಲಿ 29,321 ಮತಗಟ್ಟೆಗಳು, 86 ನಗರಸಭೆಗಳಲ್ಲಿ 3422 ಮತಗಟ್ಟೆಗಳು ಹಾಗೂ 6 ಕಾರ್ಪರೇಶನ್ ಗಳಲ್ಲಿ 2001 ಮತಗಟ್ಟೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss