ಮೈಸೂರು: ಅಪೂರ್ವ ಸ್ನೇಹ ಬಳಗ ಹಾಗೂ ಜೀವಧಾರ ರಕ್ತನಿಧಿಯ ಸಹಯೋಗದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯ ಅಂಗವಾಗಿ ಭಾನುವಾರ ಮೈಸೂರಿನ ಚಾಮುಂಡಿಪುರ ಬಡಾವಣೆಯಲ್ಲಿರುವ ಅಪೂರ್ವ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ೫೦ಕ್ಕೂ ಹೆಚ್ವು ಮಂದಿ ಯುವಕರು ರಕ್ತದಾನ ಮಾಡಿದರು.
ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ, ಮಾತನಾಡಿದ ಮಾಜಿ ಸಚಿವರಾದ ಬಿಜೆಪಿ ಶಾಸಕ ಎಸ್.ಎ ರಾಮದಾಸ್, ಕೊರೋನಾ ಲಾಕ್ ಡೌನ್ ಸಂಕಷ್ಟದಲ್ಲಿ ರಕ್ತನಿಧಿ ಸಂಖ್ಯೆ ಕುಸಿಯುತ್ತಿರುವ ಹಿನ್ನಲೆಯಲ್ಲಿ, ಮಾನವೀಯತೆ ದೃಷ್ಟಿಯಿಂದ ಯುವಸಮೂಹ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವರಕ್ಷಣೆಗೆ ಆಸರೆಯಾಗುತ್ತಿರುವುದು ಶ್ಲಾಘನೀಯ. ರಕ್ತದಾನ ಮಾಡಿದರೆ ಹೃದಯ ಕಾಯಿಲೆಗಳು ಬರುವುದಿಲ್ಲ ಉಸಿರಾಟ ಶ್ವಾಸಕೋಶ ಶಕ್ತಿ ವೃದ್ಧಿಯಾಗುತ್ತದೆ ಆರೋಗ್ಯವಾಗಿ ಜೀವಿಸಬಹುದು. ಮನೆಗೊಬ್ಬ ರಕ್ತದಾನಿ ಮುಂದಾದರೆ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.