Wednesday, July 6, 2022

Latest Posts

ರಕ್ಷಣಾ ಮಂತ್ರಿ ರಾಜ್‌ನಾಥ್ ನೇತೃತ್ವದಲ್ಲಿ ಪರಾಮರ್ಶೆ ಸಭೆ: ಲಾಕ್‌ಡೌನ್ ಮುಂದುವರಿಕೆ?

ಹೊಸದಿಲ್ಲಿ: ಏ.14 ನಂತರದ ಲಾಕ್‌ಡೌನ್ ಪರಿಸ್ಥಿತಿಯ ಪುನರಾವಲೋಕನ ಸಂಬಂಧ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಮಂಗಳವಾರ ಪ್ರ ಮುಖ ಸಚಿವರ ಸಭೆಯೊಂದು ನಡೆಯಿತು.
ಈ ಸಭೆಯಲ್ಲಿ ಏ.14ರ ತರುವಾಯ ಅನುಸರಿಸಬೇಕಿರುವ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಅಲ್ಲದೆ ಇದುವರೆಗೆ ದೇಶದಲ್ಲಿ ಕೊರೋನಾ ಸೋಂಕು ನಿವಾರಣೆ ಸಂಬಂಧ ಕೈಗೊಂಡಿರುವ ಕ್ರಮಗಳ ಪರಾಮರ್ಶೆ ನಡೆಯಿತು. ಕೊರೋನಾ ಇನ್ನೂ ತಹಬದಿಗೆ ಬಾರದ ಕಡೆ ಲಾಕ್‌ಡೌನ್ ಮುಂದುವರಿಸಬೇಕೆ ? ಸಮೂಹ ಸಾರಿಗೆ, ಹೊಟೇಲ್ ಮತ್ತು ಇತರ ವ್ಯಾಪಾರ ವಹಿವಾಟಿನ ಬಗ್ಗೆಯೂ ಈ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಯಿತು ಎನ್ನಲಾಗಿದೆ.
ಕೊರೋನಾ ವಿರುದ್ಧದ ಸಮರದಲ್ಲಿ ದೇಶದ ಜನತೆಯ ಪಾತ್ರ ಅತಿ ದೊಡ್ಡದು. ಈ ದಿಶೆಯಲ್ಲಿ ಜನತೆಯನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದು ಕೊಂಡೇ ಮುಂದಿನ ಕ್ರಮ ಜರುಗಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಈ ಸಭೆ ವ್ಯಕ್ತಪಡಿಸಿತು ಎನ್ನಲಾಗಿದೆ. ಈ ಸಭೆಯಲ್ಲಿ ಗೃಹ ಮಂತ್ರಿ ಅಮಿತ್‌ಶಾ, ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್,ಅವರಲ್ಲದೆ ಸಚಿವರಾದ ಪೀಯೂಶ್ ಗೋಯಲ್, ಪ್ರಕಾಶ್ ಜಾವಡೇಕರ್,ರಾಮ್‌ವಿಲಾಸ್ ಪಾಸ್ವಾನ್ ಮೊದಲಾದವರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss