Saturday, August 13, 2022

Latest Posts

ರವಿಬೆಳಗೆರೆ ನಿಧನಕ್ಕೆ ಡಿಸಿಎಂ ಗೋವಿಂದ ಕಾರಜೋಳ ತೀವ್ರ ಸಂತಾಪ

ದಿಗಂತ ವರದಿ ಬಾಗಲಕೋಟೆ:

ಹಿರಿಯ ಪತ್ರಕರ್ತರಾಗಿದ್ದ ಶ್ರೀ ರವಿ ಬೆಳಗೆರೆ ಅವರ ನಿಧನದಿಂದ ಅತೀವ ದುಃಖ ತಂದಿದ್ದು, ತೀವ್ರ ಸಂತಾಪ ಸೂಚಿಸುವುದಾಗಿ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತಿಳಿಸಿದ್ದಾರೆ.
ರವಿಬೆಳಗೆರೆ ಅವರು ಬಹುಮುಖ ಪ್ರತಿಭೆ. ಉತ್ತಮ ಬರಹಗಾರರೂ ಆಗಿದ್ದರು. ಅವರು ಪತ್ರಿಕೋದ್ಯಮದ ಜೊತೆಗೆ ಶಿಕ್ಷಣ ಮತ್ತು ಸಂಸ್ಕೃತಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು.
ಅವರ ಅಗಲಿಕೆಯಿಂದ ಪತ್ರಿಕೋದ್ಯಮ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಶಾಂತಿ ನೀಡಿ, ಅವರ ಕುಟುಂಬವರ್ಗದವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಭಗವಂತನಲ್ಲಿ ಡಿಸಿಎಂ ಪ್ರಾರ್ಥಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss