Tuesday, June 28, 2022

Latest Posts

ರವಿ ಕ್ಯಾಸಿನೋದಲ್ಲಿ ಜೂಜಡಿರಬೇಕು ಎಂಬ ಸಿದ್ದು ಹೇಳಿಕೆಗೆ ಸಚಿವ ಸಿ.ಟಿ. ರವಿ ತಿರುಗೇಟು

ಚಿಕ್ಕಮಗಳೂರು: ಇಸ್ಪೀಟ್ ಸುತ್ತಾಡುತ್ತಾ ಮೂರು ಮೂರು ದಿನ ಕುಳಿತರೆ ಹೊರಕ್ಕೇ ಬಾರದಿರುವವರು ಯಾರು? ಯಾರ್‍ಯಾರ ಫ್ರೆಂಡ್ಸ್ ಸರ್ಕಲ್ ಹೇಗಿದೆ? ಎನ್ನುವುದನ್ನು ಅವಲೋಕನ ಮಾಡಿಕೊಂಡಾಗ ಆರೋಪ ಮಾಡುವವರು ಎಷ್ಟು ಸಾಚಾ ಎನ್ನುವುದು ಗೊತ್ತಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ ಹಾಗೂ ಯುವ ಸಬಲೀಕರಣ ಕ್ರೀಡಾ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಸಿ.ಟಿ.ರವಿ ಕ್ಯಾಸಿನೋದಲ್ಲಿ ಜೂಜಡಿರಬೇಕು ಎನ್ನುವ ಸಿದ್ದರಾಮಯ್ಯ ಅವರ ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ನವರು ದೊಡ್ಡವರು, ಅವರಿಗೆ 70 ವರ್ಷ ಕಳೆದಿದೆ, ತಮ್ಮ ಹೇಳಿಕೆಗಳ ಬಗ್ಗೆ ಅವರು ಅಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಬಹಳಷ್ಟು ಜನ ಮಂತ್ರಿ, ಮಾಜಿ ಮಂತ್ರಿಗಳು ಸಂಭಾವಿತರಂತೆ ತೋರಿಸಿಕೊಳ್ಳುತ್ತಾರೆ. ಆಗಾಗ ಗೋವಾಗೆ ಹೋಗಿ ಬರುತ್ತಾರೆ. ಬೆಳಗಾವಿಯಲ್ಲಿ ಅಧಿವೇಶನ ನಡೆದಾಗಲೆಲ್ಲ ಎಷ್ಟು ಜನ ಅಧಿಕಾರಿಗಳು, ಜನಪ್ರತಿನಿಧಿಗಳು ಗೋವಾಕ್ಕೆ ಹೋಗಿ ಬರುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಲ್ಲಿಗೆ ಹೋಗಿಬಂದವರ ನಡುವೆ ಮರುದಿನ ಎಷ್ಟು ಲಾಭ, ಎಷ್ಟು ನಷ್ಟ ಎಂಬುದರ ಬಗ್ಗೆಯೇ ಚರ್ಚೆ ನಡೆದಿರುತ್ತದೆ ಎಂದರು.

ಯಾವ ಕ್ಲಬ್ಗೂ ಸದಸ್ಯನಲ್ಲ: ಜೂಜಟದ ಕ್ಲಬ್‌ಗಳಿಗೆ ಅವಕಾಶಕೊಟ್ಟವನು ನಾನಲ್ಲ. ನಾನು ಯಾವುದೇ ಕ್ಲಬ್‌ಗಳಿಗೂ ಸದಸ್ಯನಾಗಿಲ್ಲ. ಕೆಲವರು ಗೌರವ ಸದಸ್ಯತ್ವ ಕೊಡುತ್ತೇವೆ ಎಂದರೂ ನಾನು ಒಪ್ಪಿಲ್ಲ. ಒಂದು ಉದ್ಯಮವನ್ನು ವಾಣಿಜ್ಯದ ಉದ್ದೇಶದಿಂದ ಯೋಚಿಸಿದರೆ ಸಾಧ್ಯವಿರುವ ಎಲ್ಲ ಆಯಾಮಗಳನ್ನು ಹೇಳಿದ್ದೇನೆ ಅಷ್ಟೇ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss