ಹೊಸದಿಲ್ಲಿ: ಮುಂದಿನ ಕೆಲವು ವಾರಗಳಲ್ಲಿ ರಷ್ಯಾದ ಕೊರೋನಾ ವೈರಸ್ ಲಸಿಕೆಯ ಕೊನೆಯ ಹಂತದ ಭಾರತೀಯ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಬಹುದು ಎಂದು ಭಾರತೀಯ ಔಷಧಿ ತಯಾರಕರ ಕಾರ್ಯನಿರ್ವಾಹಕ ಮಂಗಳವಾರ ಹೇಳಿದ್ದಾರೆ.
ದೇಶಾದ್ಯಂತದ ಅನೇಕ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸ್ಪುಟ್ನಿಕ್ ವಿ ಔಷಧಿಯ ಪ್ರಯೋಗ ನಡೆಸಲಿದ್ದು, ಭಾರತದಲ್ಲಿ 1,000-2,000 ಮಂದಿಯ ಮೇಲೆ ಪ್ರಯೋಗ ನಡೆಸಲಾಗುವುದು ಎಂದು ಡಾ. ರೆಡ್ಡಿಸ್ನ ಸಿಇಒ ದೀಪಕ್ ಸಪ್ರಾ ತಿಳಿಸಿದರು.
ಭಾರತದಲ್ಲಿ 300 ಮಿಲಿಯನ್ ಡೋಸ್ ಶಾಟ್ ಉತ್ಪಾದಿಸಲು ಆರ್ಡಿಐಎಫ್ ಭಾರತೀಯ ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ರಷ್ಯಾ ಕೊರೋನಾ ವೈರಸ್ ಲಸಿಕೆಗಾಗಿ ನಿಯಂತ್ರಕ ಅನುಮೋದನೆ ನೀಡಿದೆ. ಭಾರತಕ್ಕೆ ಲಸಿಕೆ ವಿತರಣೆಯು 2020 ರ ಕೊನೆಯಲ್ಲಿ ಪ್ರಾರಂಭವಾಗಬಹುದು ಎಂದು ಆರ್ಡಿಐಎಫ್ ಹೇಳಿದೆ.