ತುಮಕೂರು: ಉಪ ವಿಭಾಗದ ಉಪ ಕೃಷಿ ಕೃಷಿ ನಿರ್ದೇಶಕರಾದ ಡಿ.ಉಮೇಶ್ ರವರ ಮಾರ್ಗದರ್ಶನದಲ್ಲಿ ತುಮಕೂರು ಉಪವಿಭಾಗದ ವ್ಯಾಪ್ತಿಯ ಎಲ್ಲಾ ತಾಲ್ಲೂಕುಗಳಲ್ಲಿ ಏಕಕಾಲದಲ್ಲಿ ಕೃಷಿ ಆಧಿಕಾರಿಗಳು ಕ್ಷಿಪ್ರ ಕಾರ್ಯಚರಣೆ ನಡೆಸಿ ರಸಗೊಬ್ಬರ ಮಾರಾಟದಲ್ಲಿ ಲೋಪ ಕಂಡು ಬಂದ 34 ಅಂಗಡಿ ಮಾಲೀಕರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಗಂಭೀರ ಲೋಪವೆಸಗಿದ 6 ಮಾರಾಟಗಾರರಿಗೆ ಸ್ಥಳದಳಲ್ಲಿಯೇ ಮಾರಾಟ ತಡೆ ಅದೇಶ ಜಾರಿ ಮಾಡಲಾಯಿತು.ಮುಂದಿನ ದಿನಗಳಲ್ಲಿ ಇದೇ ಲೋಪವೆಸಗಿದರೆ ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಲಾಯಿತು.
ಇದೇ ರೀತಿ ಜಿಲ್ಲೆಯ ವಿವಿಧೆಡೆ ಅನಿರೀಕ್ಷಿತ ದಾಳಿ ಮುಂದುವರೆಯಲಿದ್ದು, ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ಪಿ.ಓ.ಎಸ್ ಬಿಲ್ಲು ನೀಡದೇ ಇರುವುದು ಹಾಗೂ ಅಕ್ರಮ ದಾಸ್ತಾನು ಮೂಲಕ ರೈತರಿಗೆ ತೊಂದರೆಯಾದರೆ ಪ್ರಕರಣ ದಾಖಲಿಸಲಾಗುವುದೆಂದು ಎಚ್ಚರಿಸಿದರು.ಈ ವಾರದಲ್ಲಿ ಇದು ಸತತ 3 ನೇ ದಾಳಿಯಾಗಿರುತ್ತದೆ.