ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಸ್ತೆಗೆ ಕಂಟಕವಾದ ಗಣಿಗಾರಿಕೆ: 50ಕ್ಕೂ ಹೆಚ್ಚು ಟಿಪ್ಪರ್ ಲಾರಿಗಳ ತಡೆದು ಗ್ರಾಮಸ್ಥರ ಪ್ರತಿಭಟನೆ

ಶ್ರೀರಂಗಪಟ್ಟಣ : ಗಣಿಗಾರಿಕೆ ಲಾರಿಗಳು ಅಧಿಕ ಲೋಡ್ ತುಂಬಿ ನಿತ್ಯ ಸಂಚರಿಸುವುದರಿಂದ ಗ್ರಾಮದ ರಸ್ತೆ ಸೇರಿದಂತೆ ಕಾವೇರಿ ಸೇತುವೆಗೆ ಕಂಟಕ ಎದುರಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು 50ಕ್ಕೂ ಹೆಚ್ಚು ಟಿಪ್ಪರ್ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ಮಿತಿಮೀರಿ ಸಂಚರಿಸುವ 50ಕ್ಕೂ ಹೆಚ್ಚು ಟಿಪ್ಪರ್‍ಲಾರಿಗಳನ್ನು ಅಡ್ಡಗಟ್ಟಿ ನಿಲ್ಲಿಸಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ
ಮೂರು ಗಂಟೆಗೂ ಹೆಚ್ಚುಕಾಲ ಪ್ರತಿಭಟಿಸಿದರು.
ತಾಲೂಕಿನ ಹಂಗರಹಳ್ಳಿ ವ್ಯಾಪ್ತಿಯ ಕಲ್ಲುಗಣಿಗಾರಿಕೆ ಸೇರಿದಂತೆ ಜಿಲ್ಲೆಯ ಇತರೆಡೆ ನಡೆಯುವ ಗಣಿಗಾರಿಕೆ ವಸ್ತುಗಳನ್ನು ಮೈಸೂರಿಗೆ ಸಾಗಿಸುವ ಲಾರಿಗಳು ಚೆಕ್‍ಪೋಸ್ಟ್‍ಗಳ ಕಣ್ಣುತಪ್ಪಿಸುವ ಉದ್ದೇಶದಿಂದ ಮಹದೇವಪುರ ಗ್ರಾಮದ ರಸ್ತೆ ಮೂಲಕ ನಿತ್ಯ ನೂರರು ಲಾರಿಗಳು ಸಂಚರಿಸುತ್ತಿವೆ. ಇದರಿಂದ ಗ್ರಾಮದ ರಸ್ತೆಗಳು ಸಂಪೂರ್ಣವಾಗಿ ಗುಂಡಿಬಿದ್ದಿದ್ದು, ಬರುವ ಧೂಳಿನಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಭಿರಿದೆ. ಜೊತೆಗೆ ಮಹದೇವಪುರ ಹಾಗೂ ಶಾಂತಿಕೊಪ್ಪಲು ನಡುವಿನ ಕಾವೇರಿ ಸೇತುವೆ ಈಗಾಗಲೇ ಭಾಗಶಃ ಶಿಥಿಲಗೊಂಡಿದ್ದು, ಸೇತುವೆ ಮೇಲೆ ಅಕ್ರಮ ಗಣಿಗಾರಿಕೆ ಲಾರಿಗಳು ನಿರಂತರವಾಗಿ ಸಂಚರಿಸಿ ಸೇತುವೆ ಅಳಿವಿನಂಚಿಗೆ ತಲುಪುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು. ಈ ಸಂಬಂಧ ಕಳೆದ 5-6 ತಿಂಗಳ ಹಿಂದೆಯೂ ಸಹ ಪ್ರತಿಭಟನೆ ನಡೆಸಿದ್ದರೂ ಅಧಿಕಾರಿಗಳಿಂದ ಯಾವುದೇ ಪ್ರಯೋಜನವಾಗಿಲ್ಲ, ಶಾಶ್ವತ ಪರಿಹಾರ ಸಿಗುವವರೆವಿಗೂ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss