Monday, August 15, 2022

Latest Posts

ರಸ್ತೆಯನ್ನೇ ಕಣ ಮಾಡಿಕೊಂಡ ರೈತರು: ಪ್ರಯಾಣಿಕರ ಪರದಾಟ

ಹೊಸ ದಿಗಂತ ವರದಿ ರಾಮನಗರ: 

ರಾಗಿ ಕೊಯ್ಲಿನ ನಂತರ ಕೆಲ ರೈತರು ಕಣದಲ್ಲಿ ರಾಗಿ ಒಕ್ಕಣೆ ಮಾಡುವುದು ಬಿಟ್ಟು ರಸ್ತೆಗಳನ್ನೇ ಕಣಗ ಳನ್ನಾಗಿ ಮಾಡಿಕೊಂಡಿರುವುದರಿಂದ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು ತಮ್ಮ ಜೀವವನ್ನು ಕೈಯಲ್ಲಿಡಿದು ಸಾಗು ವಂತಾಗಿದೆ. ತಾಲೂಕಿನ ಗ್ರಾಮೀಣ ಭಾಗದ ಬಹುತೇಕ ಎಲ್ಲಾ ರಸ್ತೆಗಳಲ್ಲಿಯೂ ಅಲ್ಲಲ್ಲಿ ರಾಗಿ ಹಾಗೂ ಭತ್ತ ಧಾನ್ಯಗಳನ್ನು ಒಕ್ಕಣೆ ಮಾಡಲಾಗುತ್ತಿದ್ದು, ದಾರಿಯಲ್ಲಿ ಸಾಗುವ ದ್ವಿಚಕ್ರ ವಾಹನ ಸವಾರರಿಗಂತೂ ಇದರಿಂದ ತೀವ್ರ ತೆರನಾದ ತೊಂದರೆ ಎದುರಾಗಿದೆ.

ಹಾಗೆಯೇ ಕಾರಿನಂತಹ ಸಣ್ಣ ವಾಹನಗಳಲ್ಲಿ ಸಾಗುವವರೂ ಸಹ ಭಯದ ನೆರಳಲ್ಲೇ ವಾಹನ ಚಲಾಯಿ ಸುವಂತಾಗಿದೆ. ರಾಗಿ ಹಾಗೂ ಅದರ ಹುಲ್ಲು ನುಣು ಪಾಗಿರುವುದರಿಂದ ಅದರ ಮೇಲೆ ವಾಹನ ಸಾಗುವಾಗ ಜಾರಿ, ವಾಹನ ನಿಯಂತ್ರಣ ಕಳೆದುಕೊಂಡು ಸವಾ ರರು ಗಾಯಗೊಂಡಿರುವ ಸಾಕಷ್ಟು ನಿದರ್ಶ ನಗಳಿವೆ. ಕಳೆದ ವರ್ಷ ಕೋಡಂ ಬಹಳ್ಳಿ ರಸ್ತೆಯಲ್ಲಿ ಕಾರೊಂದು ಇದೇ ರೀತಿ ರಾಗಿಯ ಮೇಲೆ ಸಾಗಿ ಕಾರು ಪಲ್ಟಿಯಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಅದೇ ರೀತಿ ದ್ವಿಚಕ್ರ ವಾಹನ ಸವಾರರು ಜಾರಿಬಿದ್ದಿರುವುದು ಲೆಕ್ಕಕ್ಕೆ ಸಿಗದಿದ್ದು, ಇದು ತಮ್ಮ ಕಣ್ಣ ಮುಂದೆಯೇ ಘಟಿಸಿ ದರೂ ಕೆಲವು ರೈತರು ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ಮಾತ್ರ ಬಿಟ್ಟಿಲ್ಲ.

ಈ ಬಾರಿ ಡಿಸೆಂಬರ್ ಮಧ್ಯಭಾಗದಿಂದಲೇ ಒಕ್ಕಣೆ ಕಾರ್ಯ ನಡೆಯುತ್ತಿದ್ದು, ಎಲ್ಲಾ ರಸ್ತೆಗಳೂ ತಾತ್ಕಾಲಿಕ ಕಣಗಳಾಗಿ ಮಾರ್ಪಾಟಾಗಿಹೋಗಿವೆ. ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ತಡೆಯುವವರು ಯಾರೆಂಬುದು ಇದೀಗ ವಾಹನ ಸವಾರರ ಪಾಲಿನ ಯಕ್ಷಪ್ರಶ್ನೆಯಾಗಿದ್ದು, ಯಾರಿಗೆ ದೂರು ಕೊಡಬೇಕೆಂಬುದು ಅವರಿಗೆ ತಿಳಿಯುತ್ತಿಲ್ಲ. ಪೊಲೀಸರಿಗೆ ದೂರು ನೀಡಿದರೆ ನಾವೇನೂ ಮಾಡಲಾಗುವುದಿಲ್ಲ ಎಂಬ ಉತ್ತರ ಸಿಕ್ಕರೆ ಅದೇ ಪುಣ್ಯವಾಗಿದೆ. ಇನ್ನು ಲೋಕೋಪಯೋಗಿ ಇಲಾಖೆ ಗಮನಕ್ಕೆ ತರಲು ಹೋದರೆ, ರಸ್ತೆ ನಿರ್ಮಿಸುವುದಷ್ಟೇ ನಮ್ಮ ಕೆಲಸ ಎಂಬಂತೆ ಅಧಿಕಾರಿಗಳು ಜವಾಬ್ದಾರಿಯಿಂದ ನುಣು ಚಿಕೊಳ್ಳುತ್ತಿದ್ದಾರೆ. ಧಾನ್ಯಗಳ ಒಕ್ಕಣೆ ಕಾರ್ಯ ಫೆಬ್ರವರಿ ಅಂತ್ಯದವರೆಗೂ ಮುಂದುವರೆಯಲಿದ್ದು, ಅಷ್ಟರಲ್ಲಿ ಅನಾಹುತಗಳು ಸಂಭವಿ ಸುವುದಂತೂ ನಿಶ್ಚಿತವಾಗಿದೆ. ತಾಲೂಕು ಆಡಳಿತ ತಾತ್ಸಾರ ಮನೋಭಾವ ತೋರದೆ, ಇದನ್ನು ಗಂಭೀರವಾಗಿ ಪರಿಗಣಿಸಿ ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ತಡೆಗಟ್ಟಬೇಕಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳುವುದೇ ಕಾದುನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss