Saturday, July 2, 2022

Latest Posts

ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಬಾರ್ ಮುಂದಿಟ್ಟು ಪ್ರತಿಭಟನೆ

ಹೊಸದಿಗಂತ ವರದಿ, ಮೈಸೂರು

ಬಾರ್ ಎದುರು ನಡೆದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶವವನ್ನು ಬಾರ್ ಮುಂದೆಯೇ ಇಟ್ಟು ಪ್ರತಿಭಟನೆ ನಡೆಸಿ ಘಟನೆ ಮೈಸೂರು ತಾಲೂಕಿನ ಮಹದೇವಪುರ ಮುಖ್ಯ ರಸ್ತೆ ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ ಗ್ರಾಮಗಳಿಗೆ ಹೊಂದಿಕೊoಡoತಿರುವ ಉಗ್ರನರಸಿಂಹ ವೈನ್ ಶಾಪ್ ಎದುರು ನಡೆದಿದೆ.

ರಮ್ಮನಹಳ್ಳಿ ಗ್ರಾಮದ ನಿವಾಸಿ ಮಹದೇವು ಎಂಬವರು ಗುರುವಾರ ರಾತ್ರಿ ಬಾರ್‌ಗೆ ತೆರಳಿ, ಅಲ್ಲಿಂದ ಹಿಂದಿರುಗುವ ವೇಳೆ ಮೈಸೂರಿನಿಂದ ಮಹದೇವಪುರ ಮಾರ್ಗವಾಗಿ ತೆರಳುತ್ತಿದ್ದ ಕಾರೊಂದು ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸದರಿ ಬಾರ್‌ನಿಂದಲೇ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಶುಕ್ರವಾರ ಬೆಳಿಗ್ಗೆ ಬಾರ್ ಎದುರು ಶವವಿಟ್ಟು ಪ್ರತಿಭಟಿಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಬಾರ್ ಅನ್ನು ಮುಚ್ಚುವಂತೆ ಆಗ್ರಹಿಸಿದರು. ಇಲ್ಲದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss